ಜಮ್ಮು: ಅಮರನಾಥ ಯಾತ್ರೆಯು ಮೂರು ದಿನಗಳಿಗೆ ಪಾದಾರ್ಪಣೆ ಮಾಡಿದ್ದು, ಬುಧವಾರ ಸುಮಾರು 11,456 ಯಾತ್ರಾರ್ಥಿಗಳು ದರ್ಶನವನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ 4,694 ಯಾತ್ರಿಗಳು ಜಮ್ಮುವಿನಿಂದ ಯಾತ್ರೆ ಆರಂಭಿಸಿದ್ದಾರೆ.
ಭಗವತಿ ನಗರ್ ಯಾತ್ರಿ ನಿವಾಸ್ನಿಂದ ಇಂದು ಬೆಳಿಗ್ಗೆ 4,694 ಯಾತ್ರಿಕರನ್ನು ಒಳಗೊಂಡ ತಂಡ ಅಮರನಾಥ ಯಾತ್ರೆಯನ್ನು ಆರಂಭಿಸಿದೆ. ಇದರಲ್ಲಿ 2,052 ಮಂದಿ ಬಾಲ್ಟಲ್ ಬೇಸ್ ಕ್ಯಾಂಪ್ ಮೂಲಕ ಮತ್ತು 2,642 ಮಂದಿ ಪಹಲ್ಗಮ್ ಮಾರ್ಗವಾಗಿ ಯಾತ್ರೆ ಕೈಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊದಲ ಗುಂಪು ಮುಂಜಾನೆ 3.30 ಕ್ಕೆ ಜಮ್ಮುವಿನಿಂದ ಹೊರಟರೆ, ಎರಡನೆಯದು ಮುಂಜಾನೆ 4.05 ಕ್ಕೆ ಹೊರಟಿದೆ. ಬಾಲ್ಟಾಲ್-ಹೋಲಿ ಗುಹೆ, ಪಹಲ್ಗಮ್-ಹೋಲಿ ಗುಹೆ ಸಮೀಪ ಲಘು ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ವರದಿ ನೀಡಿದರೂ ಯಾತ್ರಿಕರು ಎದೆಗುಂದದೆ ಯಾತ್ರೆ ಮುಂದುವರೆಸಿದ್ದಾರೆ. ಪವಿತ್ರ ಗುಹೆಯಲ್ಲಿ ಪ್ರಸ್ತುತ ತಾಪಮಾನವು 8.6 ಡಿಗ್ರಿ ಸೆಲ್ಸಿಯಸ್ ಇದೆ.
ಈ ವರ್ಷದ ಅಮರನಾಥ ಯಾತ್ರೆ ಜುಲೈ 1 ರಂದು ಪ್ರಾರಂಭವಾಗಿದ್ದು, ಆಗಸ್ಟ್ 15 ರಂದು 45 ದಿನಗಳ ನಂತರ ಶ್ರವಣ ಪೂರ್ಣಿಮೆಯ ಶುಭ ದಿನದಂದು ಕೊನೆಗೊಳ್ಳುತ್ತದೆ.
ಕಾಶ್ಮೀರ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿ ಈ ಗುಹೆ ದೇಗುಲವು ಇದ್ದು, ಹಿಮದಿಂದ ರೂಪಿತವಾದ ಶಿವಲಿಂಗವನ್ನು ಹೊಂದಿದೆ, ಇದು ಶಿವನ ಪೌರಾಣಿಕ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಭಕ್ತರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.