ರಾಯ್ಪುರ: 13 ವರ್ಷಗಳ ಹಿಂದೆ ನಕ್ಸಲರು ಧ್ವಂಸ ಮಾಡಿದ ಐದು ಶಾಲೆಗಳು ಛತ್ತೀಸ್ಗಢದಲ್ಲಿ ಪುನರಾರಂಭಗೊಂಡಿದೆ. ಇದರಿಂದ ಸ್ಥಳಿಯ ನಿವಾಸಿಗಳು ಸಾಕಷ್ಟು ಸಂತೋಷಗೊಂಡಿದ್ದಾರೆ.
ರಾಜಧಾನಿ ರಾಯ್ಪುರದಿಂದ 45 ಕಿಮೀ ದೂರದಲ್ಲಿರುವ ಜಗರ್ಗುಂಡ ಗ್ರಾಮದಲ್ಲಿನ ಐದು ಶಾಲೆ ಪುನರಾರಂಭಗೊಂಡಿದೆ. ನಕ್ಸಲ್ ಪೀಡಿತ ಗ್ರಾಮವಾಗಿದ್ದ ಇದು ಈಗ ಸಂಪೂರ್ಣ ಸಂರಕ್ಷಿತ ಗ್ರಾಮವಾಗಿದೆ. ಇಲ್ಲಿನ ಐದು ಶಾಲೆಗಳನ್ನು ಸಂಪೂರ್ಣವಾಗಿ ಮರು ನಿರ್ಮಾಣ ಮಾಡಲಾಗಿದ್ದು, ಕಳೆದ ವಾರ ಪುನರಾರಂಭಗೊಳಿಸಲಾಗಿದೆ.
2006 ರಲ್ಲಿ 12 ಗ್ರಾಮಗಳಲ್ಲಿದ್ದ ಮಿಲಿತಿಯ ಸಲ್ವ ಜುಡಂ ಎಂಬ ಸ್ಥಳಿಯ ಬುಡಕಟ್ಟು ಜನಾಂಗದ 1,200 ಕುಟುಂಬಗಳಿಗೆ ಜಗರ್ಗುಂಡ ಗ್ರಾಮದಲ್ಲಿ ಸರ್ಕಾರ ಪುನರ್ವಸತಿ ಕಲ್ಪಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ನಕ್ಸಲರು ಇಲ್ಲಿನ ಶಾಲೆಗಳನ್ನು ಧ್ವಂಸಗೊಳಿಸಿದ್ದರು. ಪ್ರಸ್ತುತ ಈ ಗ್ರಾಮ ಸರ್ಕಾರ ಭದ್ರತೆಯಲ್ಲಿದ್ದು, ಮೂರು ತಿಂಗಳಿಗೊಮ್ಮೆ ಇಲ್ಲಿನ ನಿವಾಸಿಗಳಿಗೆ ಪಡಿತರ ಸೇರಿದಂತೆ ಇತರ ಅಗತ್ಯಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಇದೀಗ ಇಲ್ಲಿನ ಐದು ಶಾಲೆಗಳು ಪುನರಾರಂಭಗೊಂಡಿದ್ದು, 240 ಮಕ್ಕಳು ಈಗಾಗಲೇ ದಾಖಲಾಗಿದ್ದಾರೆ, ಇವರಿಗೆಲ್ಲಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಈ ಶಾಲೆಗಳಲ್ಲಿ ವ್ಯವಸ್ಥೆಯನ್ನೂ ಸುಧಾರಿಸುವುದಾಗಿ ಸರ್ಕಾರ ತಿಳಿಸಿದೆ.
ಇದುವರೆಗೆ ಕಲಿಯಲು ದೂರದ ಊರಿಗೆ ಹೋಗುತ್ತಿದ್ದ ಇಲ್ಲಿನ ಮಕ್ಕಳಿಗೆ ಶಾಲೆಗಳು ಪುನರಾರಂಭಗೊಂಡಿರುವುದು ಅತೀವ ಸಂತೋಷವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.