ನವದೆಹಲಿ: ಹಳೆ ದೆಹಲಿಯ ಚಾಂದನಿ ಚೌಕ್ನಲ್ಲಿರುವ ದೇವಾಲಯವೊಂದನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಧ್ವಂಸ ಮಾಡಿದೆ. ಸ್ಥಳೀಯ ಜನರು ನೀಡಿದ ಮಾಹಿತಿಯ ಪ್ರಕಾರ, ಚಾಂದಿನಿ ಚೌಕ್ ಪ್ರದೇಶದ ಲಾಲ್ ಕುವಾನ್ನಲ್ಲಿರುವ ದುರ್ಗಾ ಮಾತಾ ಮಂದಿರಕ್ಕೆ ಜೂನ್ 30 ರ ರಾತ್ರಿ ಸುಮಾರು 200 ಜನರ ಗುಂಪು ನುಗ್ಗಿದ್ದು, ಅಲ್ಲಿದ್ದ ದೇವರ ಮೂರ್ತಿ ಇತ್ಯಾದಿಗಳನ್ನು ಭಗ್ನಗೊಳಿಸಿದೆ.
ಈ ಘಟನೆಯು ಹೌಜ್ ಖಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರ್ಕಿಂಗ್ ಸಮಸ್ಯೆಯೊಂದರಿಂದ ಪ್ರಾರಂಭವಾದ ಗಲಾಟೆ ಕೋಮು ಸಂಘರ್ಷಕ್ಕೆ ತಿರುಗಿ ದೇಗುಲ ಭಗ್ನಗೊಳಿಸುವವರೆಗೂ ಮುಂದುವರೆದಿದೆ ಎನ್ನಲಾಗಿದೆ. ಹಿಂದೂಗಳ ಮನೆಗೂ ಕೆಲ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ದೇವಾಲಯದಲ್ಲಿನ ಪ್ರತಿಮೆಗಳು, ವಸ್ತುಗಳು, ಗಾಜಿನ ಫಲಕಗಳು ಇತ್ಯಾದಿಗಳನ್ನು ಒಡೆದು ಹಾಕಲಾಗಿದೆ. ಪರದೆ ಇತ್ಯಾದಿಗಳನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಂಚಿಕೊಂಡಿರುವ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಸ್ಪಷ್ಟವಾಗಿವೆ. ರಾತ್ರಿ ಸುಮಾರು 12 ಗಂಟೆಗೆ ಈ ಘಟನೆಗಳು ನಡೆದಿವೆ. ಸ್ಥಳೀಯರ ಪ್ರಕಾರ, ಈ ಪ್ರದೇಶದ ಹಿಂದೂಗಳ ಜನಸಂಖ್ಯೆಯು ಕೇವಲ ಶೇ.5ರಷ್ಟಿದೆ ಮತ್ತು ಉಳಿದ ಶೇ.95ರಷ್ಟು ಮಂದಿ ಮುಸ್ಲಿಮರು.
ಬಂಡಾಯವೆದ್ದಿರುವ ಎಎಪಿ ಶಾಸಕ ಕಪಿಲ್ ಮಿಶ್ರಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಯುವಕರು ದೇವಾಲಯಕ್ಕೆ ನುಗ್ಗಿದ ಮತ್ತು ಆ ಪ್ರದೇಶದ ಹೌಜ್ ಖಾಜಿ ಪೊಲೀಸ್ ಠಾಣೆಯನ್ನು ಸುತ್ತುವರೆದ ದೃಶ್ಯವಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಬಳಿಕ ಹಿರಿಯ ಅಧಿಕಾರಿಗಳನ್ನು ಒಳಗೊಂಡ ದೆಹಲಿ ಪೊಲೀಸರ ಪಡೆ ಈ ಪ್ರದೇಶಕ್ಕೆ ಆಗಮಿಸಿದ್ದು, ಮತ್ತಷ್ಟು ಹಿಂಸಾಚಾರ ನಡೆಯುವುದನ್ನು ತಪ್ಪಿಸಿದೆ. ಪೊಲೀಸರ ಆಗಮನದಿಂದ ಪ್ರಾಣ ಹಾನಿ ಸಂಭವಿಸುವುದು ತಪ್ಪಿದೆ ಎನ್ನಲಾಗಿದೆ. ಆದರೆ ಘಟನೆಯ ಬಗ್ಗೆ ಪೊಲೀಸರು ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನು ಹೊರ ಹಾಕದೆ ಮೌನಕ್ಕೆ ಜಾರಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.