ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯು ಆರಂಭವಾದ ದಿನ ಇಂದು. ನಾಲ್ಕು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರವು ಜುಲೈ 1ರಂದು ಡಿಜಿಟಲ್ ಇಂಡಿಯಾ ಯೋಜನೆಯನ್ನು ಆರಂಭ ಮಾಡಿತ್ತು. ಇಂದು ಅದು ದೇಶದಲ್ಲೇ ಡಿಜಿಟಲ್ ಕ್ರಾಂತಿಯನ್ನುಂಟು ಮಾತ್ತಿದೆ. ಡಿಜಿಟಲ್ ಇಂಡಿಯಾದ ವಾರ್ಷಿಕೋತ್ಸವದ ಅಂಗವಾಗಿ ಇಂದು ಮಾಹಿತಿ ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಮತ್ತು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಡಿಜಿಟಲ್ ಯೋಜನೆ ಮತ್ತು ಅದರಿಂದ ಜನ ಜೀವನದ ಮೇಲೆ ಆಗುತ್ತಿರುವ ಸಕಾರಾತ್ಮಕ ಪ್ರಭಾವವನ್ನು ಎತ್ತಿ ತೋರಿಸುವುದು ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ..
ಡಿಜಿಟಲ್ ಯೋಜನೆ, ಇದಕ್ಕಾಗಿ ಅಪಾರ ಕೊಡುಗೆ ನೀಡುತ್ತಿರುವವರ ಶ್ರಮ ಮತ್ತು ಕೊಡುಗೆಗಳನ್ನು ಈ ದಿನವನ್ನು ಆಚರಿಸುವ ಮೂಲಕ ಸ್ಮರಿಸಲಾಗುತ್ತಿದೆ.
ಸಚಿವಾಲಯ ಮತ್ತು ಡಿಸಿ ಕಚೇರಿ ಮುಂತಾದ ಕಡೆಗಳಲ್ಲಿ ಡಿಜಿಟಲ್ ಬೋರ್ಡ್ಗಳಲ್ಲಿ ಪೋಸ್ಟರ್ಗಳನ್ನು ಪ್ರದರ್ಶಿಸಲಾಗುವುದು ಎಂದು ಐಟಿ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
“ರಾಜ್ಯ ಸರ್ಕಾರ ಮತ್ತು ಎನ್ಐಸಿಯ ಯೋಜನೆಗಳಾದ ಇ-ಜಿಲ್ಲೆ, ಕಂದಾಯ ನ್ಯಾಯಾಲಯ ಪ್ರಕರಣಗಳು ಎಂಐಎಸ್, ಡಿಜಿ-ಲಾಕರ್, ಮಧ್ಯಾಹ್ನದ ಬಿಸಿಯೂಟ, ಸ್ವಯಂಚಾಲಿತ ವರದಿ ಮತ್ತು ನಿರ್ವಹಣಾ ವ್ಯವಸ್ಥೆ ಮತ್ತು ಇ-ಹಿಂಭೂಮಿ ಭೂ ದಾಖಲೆಗಳ ಕಂಪ್ಯೂಟರೈಝೇಶನ್ ಮುಂತಾದವುಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದಿದ್ದಾರೆ.
ಡಿಜಿಟಲ್ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರೂ ಟ್ವಿಟ್ ಮಾಡಿದ್ದು, “ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ತಂತ್ರಜ್ಞಾನವನ್ನು ಹೆಚ್ಚು ಲಭ್ಯವಾಗುವಂತೆ ಮಾಡಲು ನಾಲ್ಕು ವರ್ಷಗಳ ಹಿಂದೆ ಈ ದಿನದಂದು ಡಿಜಿಟಲ್ ಇಂಡಿಯಾವನ್ನು ಪ್ರಾರಂಭಿಸಲಾಯಿತು. ಡಿಜಿಟಲ್ ಇಂಡಿಯಾ ಜನರನ್ನು ಸಬಲೀಕರಣ ಮಾಡಿದೆ, ಭ್ರಷ್ಟಾಚಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಬಡವರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಿದೆ” ಎಂದಿದ್ದಾರೆ.
“ಡಿಜಿಟಲ್ ಇಂಡಿಯಾ ಯೋಜನೆಯು ಜನರ ಚಳುವಳಿಯಾಗಿದೆ, ಇದು ಜನರ ಶಕ್ತಿ, ಅವರ ಕಲಿಯುವ ಉತ್ಸಾಹ ಮತ್ತು ಹೊಸತನದ ಪ್ರಯತ್ನಗಳೊಂದಿಗೆ ನಡೆಸಲ್ಪಡುತ್ತದೆ. ಡಿಜಿಟಲ್ ಇಂಡಿಯಾವನ್ನು ಬಲಪಡಿಸಲು ಶ್ರಮಿಸುತ್ತಿರುವ ಎಲ್ಲರಿಗೂ ನಾನು ನಮಿಸುತ್ತೇನೆ” ಎಂದಿದ್ದಾರೆ.
The @_DigitalIndia initiative is a people’s movement, powered by people’s strength and their efforts to learn as well as innovate.
I salute all those assiduously working to strengthen Digital India and wish them the very best for their future efforts. #DigitalIndiaNewIndia
— Narendra Modi (@narendramodi) July 1, 2019
On this day, 4 years ago @_DigitalIndia was launched, to leverage the power of technology and make technology more accessible. Digital India has empowered people, significantly reduced corruption and improved public service delivery to benefit the poor. #DigitalIndiaNewIndia
— Narendra Modi (@narendramodi) July 1, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.