ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ನ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಆಗಿರುವ ಅಪರ್ಣ ಕುಮಾರ್ ಅವರು ಉತ್ತರ ಅಮೆರಿಕದ ಅತ್ಯುನ್ನತ ಶಿಖರವಾದ ಮೌಂಟ್ ಡೆನಾಲಿ ಪರ್ವತವನ್ನು ಹತ್ತಿದ ದೇಶದ ಮೊದಲ ನಾಗರಿಕ ಸೇವಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಟಿಬಿಪಿ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಅಪರ್ಣ ಅವರಿಗೆ ಅಭಿನಂದನೆಗಳನ್ನು ತಿಳಿಸಿದೆ. “ಉತ್ತರ ಅಮೆರಿಕದ 20,310 ಅಡಿ ಎತ್ತರದ ಅತ್ಯುನ್ನತ ಶಿಖರ ಮೌಂಟ್ ಡೆನಾಲಿ ಪರ್ವತವನ್ನು ಏರಿದಕ್ಕಾಗಿ ಮತ್ತು ತನ್ನ ಮಿಷನ್ ‘ಸೆವೆನ್ ಸಮ್ಮಿತ್ಸ್’ ಚಾಲೆಂಜ್ನಲ್ಲಿ ಏಳನೇ ಸಮಿತ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ನಾರ್ದರ್ನ್ ಫ್ರಾಂಟಿಯರ್ ಐಟಿಬಿಪಿಯ ಡಿಐಜಿ ಅಪರ್ಣ ಕುಮಾರ್ ಅವರನ್ನು ನಾವು ಅಭಿನಂದಿಸುತ್ತೇವೆ. ಈ ಸಾಧನೆಯನ್ನು ಮಾಡಿದ ದೇಶ ಮೊದಲ ನಾಗರಿಕ ಸೇವಕಿ ಮತ್ತು ಐಪಿಎಸ್ ಅಧಿಕಾರಿ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ “ಎಂದು ಐಟಿಬಿಪಿ ಟ್ವೀಟ್ ಮಾಡಿದೆ.
7 ಶೃಂಗಗಳನ್ನು ಏರುವ ಅವರ ಗುರಿ ಮೌಂಟ್ ಡೆನಾಲಿ ಪರ್ವತವನ್ನು ಏರುವ ಮೂಲಕ ಸಮಾಪನಗೊಂಡಿದೆ.
ಸೌತ್ಪ ಪೋಲ್ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಮಹಿಳಾ ಐಪಿಎಸ್ ಡಿಐಜಿ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಯೂ ಇವರಾಗಿದ್ದಾರೆ.
We congratulate Ms Aparna Kumar, DIG Northern Frontier ITBP on summitting Mount Denali, highest peak of North America (20,310 feet) & completing her Seventh Summit in her mission ‘Seven Summits’ Challenge. She is the first civil servant & IPS officer to achieve this rare feet. pic.twitter.com/Xy2v7z1r0p
— ITBP (@ITBP_official) June 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.