ನವದೆಹಲಿ: ಲೋಕಸಭೆಯ ಕಲಾಪಕ್ಕೆ ಆಗಮಿಸಿದ್ದ ವೇಳೆ ಸಿಂಧೂರ ಧರಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನಸ್ರುತ್ ಜಹಾನ್ ವಿರುದ್ಧ ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. ಇತ್ತೀಗಷ್ಟೇ ನಸ್ರುತ್ ಅವರು ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಸಮುದಾಯದವರ ತೀವ್ರ ಟೀಕೆಗೆ ಒಳಗಾಗಿದ್ದರು.
ದಿಯೋಬಂದ್ ಮೌಲ್ವಿ ಮುಫ್ತಿ ಅಸಾದ್ ವಾಸ್ಮೀ ಈ ಫತ್ವಾವನ್ನು ಹೊರಡಿಸಿದ್ದಾರೆ. ನಸ್ರುತ್ ಅವರು ಜೈನ ಧರ್ಮೀಯನನ್ನು ವಿವಾಹವಾಗಿದ್ದಾರೆ, ಇದು ಧರ್ಮಕ್ಕೆ ವಿರುದ್ಧವಾದುದು. ಮುಸ್ಲಿಮರು ಮುಸ್ಲಿಮ್ ವ್ಯಕ್ತಿಯನ್ನು ಮಾತ್ರ ವಿವಾಹವಾಗಬೇಕು ಎಂದು ಇವರು ಹೇಳಿದ್ದಾರೆ.
“ನಸ್ರುತ್ ಜಹಾನ್ ನಟಿಯಾಗಿದ್ದು, ನಟಿಯರು ಧರ್ಮದ ಬಗ್ಗೆ ಯೋಚಿಸುವುದಿಲ್ಲ. ಅವರಿಗೇನು ಅನಿಸುತ್ತದೆಯೋ ಅದನ್ನು ಮಾಡುತ್ತಾರೆ. ಇದನ್ನೇ ಆಕೆ ಸಂಸತ್ತಿನಲ್ಲೂ ಮಾಡಿದ್ದಾಳೆ” ಎನ್ನುವ ಮೂಲಕ ನಟಿಯ ವೃತ್ತಿಯನ್ನು ಅವಹೇಳನ ಮಾಡುವ ಕಾರ್ಯ ಮಾಡಿದ್ದಾರೆ.
ಜಹಾನ್ ಮಂಗಳಸೂತ್ರ, ಸಿಂಧೂರ ಧರಿಸಿಕೊಂಡು ಸಂಸತ್ತಿಗೆ ಆಗಮಿಸಿದ್ದಾಳೆ, ಅದರ ಬಗ್ಗೆ ಮಾತನಾಡುವುದು ವ್ಯರ್ಥ. ಆಕೆಯ ಷರಿಯತ್ ಬಗ್ಗೆ ಅರ್ಥ ಮಾಡಲು ಬಯಸುತ್ತೇನೆ ಅಷ್ಟೇ ಎಂದಿದ್ದಾರೆ.
ನಸ್ರುತ್ ಅವರು ಸಂಸತ್ತಿನಲ್ಲಿ ‘ನಸ್ರುತ್ ಜಹಾನ್ ರಹು ಜೈನ್’ ಎಂಬ ಹೆಸರಿನಿಂದ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದು, ವಂದೇ ಮಾತರಂ ಎನ್ನುವ ಮೂಲಕ ಅದನ್ನು ಅಂತ್ಯಗೊಳಿಸಿದ್ದರು. ಇತ್ತೀಚಿಗಷ್ಟೇ ಅವರು ನಿಖಿಲ್ ಜೈನ್ ಎಂಬುವವರನ್ನು ವಿವಾಹವಾಗಿದ್ದಾರೆ. ಮಂಗಳಸೂತ್ರ, ಸಿಂಧೂರ, ಬಳೆ ತೊಟ್ಟು ಅವರು ಸಂಸತ್ತಿಗೆ ಆಗಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.