ಕಠ್ಮಂಡು: ತನ್ನೊಡೆಯನಿಗೆ ನಿಯತ್ತಾಗಿ ಬದುಕುವ, ಉತ್ತಮ ಸಾಂಗತ್ಯ ನೀಡುವ ಪ್ರಾಣಿ ಎಂದರೆ ಅದು ನಾಯಿ. ಇಂತಹ ನಾಯಿಗಳಿಗೆ ಧನ್ಯವಾದ ಸಮರ್ಪಿಸಲೆಂದೇ ನೇಪಾಳದಲ್ಲಿ ಒಂದು ಹಬ್ಬವಿದೆ. ಈ ಹಬ್ಬವೇ ಕುಕುರ್ ತಿಹಾರ್.
ಕುಕುರ್ ತಿಹಾರ್ ವರ್ಷಕೊಮ್ಮೆ ಬರುವ ಹಿಂದೂ ಹಬ್ಬ. ಈ ಹಬ್ಬದ ಎರಡನೇ ದಿನವನ್ನು ನಾಯಿಗಳಿಗೆಂದೇ ಮೀಸಲಿಡಲಾಗುತ್ತದೆ. ನಿಯತ್ತು ಮತ್ತು ಸ್ನೇಹಕ್ಕಾಗಿ ನಾಯಿಗೆ ಈ ದಿನ ಧನ್ಯವಾದ ಅರ್ಪಣೆ ಮಾಡಲಾಗುತ್ತದೆ.
ಈ ವೇಳೆ ನಾಯಿಗೆ ಗೌರವದ ಪ್ರತೀಕವಾಗಿ ಹೂವಿನ ಹಾರ ಮತ್ತು ಪವಿತ್ರತೆಯ ಸಂಕೇತವಾಗಿ ಹಣೆಗೆ ಕುಂಕುಮ ಹಚ್ಚಲಾಗುತ್ತದೆ, ವೈವಿಧ್ಯಮಯ ಖಾದ್ಯವನ್ನು ಅದಕ್ಕೆ ನೀಡಲಾಗುತ್ತದೆ.
ಚೀನಾದಲ್ಲಿ ಆಚರಿಸುವ ನಾಯಿ ಮಾಂಸದ ಹಬ್ಬ , ವಿವಿಧ ಕಡೆಯಿರುವ ನಾಯಿ ಕಾದಾಟ ಸ್ಪರ್ಧೆಗೆ ವ್ಯತಿರಿಕ್ತವಾಗಿರುವ ಈ ಹಬ್ಬ ಮಾನವ ಮತ್ತು ಪ್ರಾಣಿಯ ನಡುವಣ ಬಾಂಧವ್ಯ ಮತ್ತು ಸ್ನೇಹದ ಸಂಕೇತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.