ಒಸಾಕಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಜಪಾನಿನ ಒಸಾಕಾದಲ್ಲಿ ಜಿ20 ಶೃಂಗಸಭೆಯ ಸೈಡ್ಲೈನಿನಲ್ಲಿ ಮಾತುಕತೆಯನ್ನು ನಡೆಸಿದ್ದು, ವ್ಯಾಪಾರ, ಇರಾನ್ ಮತ್ತು 5ಜಿ ಕಮ್ಯೂನಿಕೇಶನ್ ನೆಟ್ವರ್ಕ್ ಮುಂತಾದ ಹಲವಾರು ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಟ್ರಂಪ್ ಅವರು, ನಾವು ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ನಮ್ಮ ದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಹತ್ತಿರವಾಗಿವೆ ಎಂದಿದ್ದಾರೆ. ಮಾತ್ರವಲ್ಲದೇ, ವ್ಯಾಪಾರದಲ್ಲಿ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಲಿದ್ದೇವೆ ಎಂದಿದ್ದಾರೆ.
“ನಾವು ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ನಮ್ಮ ದೇಶಗಳು ಎಂದೂ ಇಷ್ಟೊಂದು ಹತ್ತಿರವಾಗಿರಲಿಲ್ಲ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಮಿಲಿಟರಿ ಸೇರಿದಂತೆ ಹಲವು ವಲಯಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ, ನಾವು ಇಂದು ವ್ಯಾಪಾರದ ಬಗ್ಗೆ ಚರ್ಚಿಸುತ್ತೇವೆ” ಎಂದು ಡೊನಾಲ್ಡ್ ಟ್ರಂಪ್ ಅವರು ಮೋದಿಯೊಂದಿಗೆ ಮಾತುಕತೆ ನಡೆಸುವ ವೇಳೆ ಹೇಳಿದ್ದಾರೆ.
ಅಮೆರಿಕಾ ಮತ್ತು ಭಾರತದ ನಡುವೆ ನಡೆಯುತ್ತಿರುವ ವ್ಯಾಪಾರ ಬಿಕ್ಕಟ್ಟನ್ನು ಹೋಗಲಾಡಿಸಲು ಟ್ರಂಪ್ ಅವರೊಂದಿಗಿನ ಪ್ರಧಾನ ಮಂತ್ರಿಗಳ ದ್ವಿಪಕ್ಷೀಯ ಮಾತುಕತೆ ನಿರ್ಣಾಯಕವಾಗಿತ್ತು. ಜೂನ್ 1 ರಂದು ಅಮೆರಿಕಾವು ಭಾರತಕ್ಕೆ ನೀಡಿದ ದೀರ್ಘಕಾಲದ ವ್ಯಾಪಾರ ರಿಯಾಯಿತಿಯನ್ನು ಹಿಂತೆಗೆದುಕೊಂಡಿತ್ತು, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಈ ತಿಂಗಳ ಆರಂಭದಲ್ಲಿ 28 ಯುಎಸ್ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಳಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.