ಬಿಜೆಪಿಯು ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಬಹುಮತವನ್ನು ಗೆದ್ದು ಮತ್ತು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳೇ ಕಳೆದಿವೆ. ಭಾರತದ ಅತಿದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಸಂನ್ಯಾಸಿ ಆದಿತ್ಯನಾಥ್ ಅವರನ್ನು ನೇಮಿಸುವ ಬಿಜೆಪಿಯ ನಿರ್ಧಾರವು ಮಹತ್ವ ಸಾಮಾಜಿಕ ಸಂದೇಶವನ್ನು ದೇಶಕ್ಕೆ ನೀಡಿತ್ತು. ಕೇಸರಿ ನಿಲುವಂಗಿಯನ್ನು ಧರಿಸುವುದಕ್ಕೂ ಮತ್ತು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿಲ್ಲ. ಖಾವಿ ತೊಟ್ಟವರೂ ಜನರ ಹಿತಕ್ಕಾಗಿ ಪ್ರಗತಿಪರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು ಎಂಬ ಸಂದೇಶವನ್ನು ಈ ನಿರ್ಧಾರ ಸಾರಿದೆ. ಯೋಗಿ ಅವರು ನಡೆಸುತ್ತಿರುವ ಕಾರ್ಯಗಳು ಹುಸಿ ಜಾತ್ಯಾತೀತತೆಯ ಅಡಿಯಲ್ಲಿ ಓಲೈಕೆ ರಾಜಕಾರಣ ಮಾಡುತ್ತಿದ್ದವರನ್ನು ತೀವ್ರವಾಗಿ ಕಂಗೆಡುವಂತೆ ಮಾಡಿದೆ.
ಎರಡು ವರ್ಷಗಳ ಆಡಳಿತದಲ್ಲಿ ಯೋಗಿ ಅವರು ಅಭಿವೃದ್ಧಿ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಒಂದು ವಿಶಿಷ್ಟವಾದ ಮಾರ್ಗಸೂಚಿಯನ್ನು ನೀಡಿದ್ದರೂ ಕೂಡ ಅವರ ವಿರೋಧಿಗಳು ಇಂದಿಗೂ ಅವರನ್ನು ಕಾಮಾಲೆ ದೃಷ್ಟಿಯಿಂದ ನೋಡುತ್ತಾರೆ. ಇಂತಹ ಒಬ್ಬ ಯುಪಿ ಪತ್ರಕರ್ತ, ತನ್ನ ಬ್ಲಾಗ್ನಲ್ಲಿ ಆದಿತ್ಯನಾಥ್ ಅವರನ್ನು ದೇಶದ ಅತೀ ಕೆಟ್ಟ ಮುಖ್ಯಮಂತ್ರಿ ಎಂದು ಕರೆದಿದ್ದಾರೆ. ಆದಿತ್ಯನಾಥ್ ಅವರ ಕಾರ್ಯಕ್ಷಮತೆಯನ್ನು ಇತರ ಮುಖ್ಯಮಂತ್ರಿಗಳೊಂದಿಗೆ ಹೋಲಿಸಲು ಈ ಲೇಖಕ ಯಾವುದೇ ಸ್ಪಷ್ಟ ಉದಾಹರಣೆಗಳನ್ನು ಬಳಸಿಲ್ಲ, ಆದರೂ ಆತನ ಸಂಶೋಧನೆಯ ತುಣುಕನ್ನು ಎಲ್ಲದಕ್ಕೂ ದಾಖಲೆ ಕೇಳುವ ಹಿರಿಯ ಮಾಧ್ಯಮ ವೃತ್ತಿಪರರ ವೇದಿಕೆಯು ಅನುಮೋದಿಸಿದೆ ಎಂಬುದೇ ದೊಡ್ಡ ದುರಂತ. ವಾಸ್ತವವಾಗಿ, ಕೇವಲ ತಮ್ಮ ಚಹಾ ಹಣ ಪಾವತಿಗಾಗಿ 800 ಶಬ್ದಗಳ ಲೇಖನ ಬರೆಯುವ ಪತ್ರಕರ್ತರಿಂದ ದಾಖಲೆ ಸ್ಪಷ್ಟತೆಯ ಪತ್ರಿಕೋದ್ಯಮವನ್ನು ನಿರೀಕ್ಷೆ ಮಾಡುವುದೇ ತಪ್ಪು.
ಆದಿತ್ಯನಾಥ ಅವರ ಸಾಧನೆಗಳ ಹಾದಿಯ ಸಣ್ಣ ವಿವರ ಇಲ್ಲಿದೆ
ಮಹತ್ವಾಕಾಂಕ್ಷೆಯ ಜಿಲ್ಲೆಗಳು
ಜುಲೈ 2018 ರಲ್ಲಿ ಆದಿತ್ಯನಾಥ್ ಅವರು ರಾಜ್ಯದ ಎಂಟು ಹಿಂದುಳಿದ ಜಿಲ್ಲೆಗಳಾದ ಬಲರಾಂಪುರ್, ಶ್ರಾವಸ್ತಿ, ಬಹ್ರೇಚ್, ಸಿದ್ಧಾರ್ಥನಗರ, ಚಂದೌಲಿ, ಶೋಭದ್ರಾ, ಫತೇಪುರ್ ಮತ್ತು ಚಿತ್ರಕೂಟ್ ಮೇಲೆ ಹಿಡಿತ ಸಾಧಿಸಲು ಅನುದಾನ ಮತ್ತು ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದರು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸಿದರು. ಅಲ್ಲದೇ, ರಾಷ್ಟ್ರೀಯ ರಾಜಧಾನಿಗೆ ಪರ್ಯಾಯವಾಗಿ ಇಡೀ ರಾಜ್ಯವನ್ನು ಹೂಡಿಕೆಯ ಅವಕಾಶವುಳ್ಳ ಕೇಂದ್ರವಾಗಿಸುವಂತೆ ಮತ್ತು ಗುತ್ತಿಗೆ ಏಕಸ್ವಾಮ್ಯತೆಯನ್ನು ತೊಡೆದು ಹಾಕುವಂತೆ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀತಿ ಆಯೋಗ 2018 ರ ಡಿಸೆಂಬರ್ನಲ್ಲಿ ಬಿಡುಗಡೆ ಮಾಡಿದ ಅನುಸರಣಾ ವರದಿಯ ಪ್ರಕಾರ, ಮಹತ್ವಾಕಾಂಕ್ಷೆಯ ಜಿಲ್ಲೆಗಳ ವಿಭಾಗದಲ್ಲಿ ಸಿಧಾರ್ಥ್ನಗರ ಮೊದಲ ಟಾಪ್ ಮೂರು ಜಿಲ್ಲೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇತರ ಎರಡು ಜಿಲ್ಲೆಗಳು ಕುಪ್ವಾರ (ಜಮ್ಮು ಮತ್ತು ಕಾಶ್ಮೀರ) ಮತ್ತು ಜಮುಯಿ (ಬಿಹಾರ) ಆಗಿವೆ. (ಈ ಜಿಲ್ಲೆಗಳು ಉತ್ತಮ ಕಾರ್ಯಕ್ರಮಗಳನ್ನು ಪ್ರದರ್ಶಿಸಿವೆ ಮತ್ತು 2018 ರ ಜೂನ್ ಮತ್ತು ಅಕ್ಟೋಬರ್ ನಡುವೆ ತಮ್ಮ ಅಂಕಗಳಲ್ಲಿ ಗುಣಾತ್ಮಕ ಜಿಗಿತವನ್ನು ಪ್ರದರ್ಶಿಸಿವೆ).
ಸುಲಲಿತ ಉದ್ಯಮ
ಒಟ್ಟಾರೆ ಶೇ. 92.89 ರಷ್ಟು ಅಂಕಗಳೊಂದಿಗೆ, ಉತ್ತರಪ್ರದೇಶವು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ನಡೆಸಿದ 2017-18ರ ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ 2017ರ ಸಾಧಕರ ಪಟ್ಟಿಯಲ್ಲಿ (ಶೇ.90-95 ಅಂಕ) ಸ್ಥಾನ ಪಡೆದಿದೆ. 2016-17ರಲ್ಲಿ ಉತ್ತರ ಪ್ರದೇಶ ಶೇ 85.52 ಅಂಕಗಳನ್ನು ಗಳಿಸಿದೆ.
ಕೈಗಾರಿಕೆಗಳಿಂದ ಸ್ವಯಂ ತಪಾಸಣೆ, ಕಾರ್ಖಾನೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಓವರ್ ಟೈಮ್ ಮಿತಿಗಳ ಹೆಚ್ಚಳ, ವಾಣಿಜ್ಯ ಸ್ಥಾಪನೆಗಳು ಉತ್ತರಪ್ರದೇಶ ವ್ಯವಹಾರ ವಾತಾವರಣವನ್ನು ಸುಧಾರಿಸಲು ಸಹಾಯ ಮಾಡಿದೆ.
ನಿವೇಶ್ ಮಿತ್ರ ಎಂಬ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಉತ್ತರ ಪ್ರದೇಶದ 20 ಇಲಾಖೆಗಳಲ್ಲಿ ಆನ್ಲೈನ್ ಎಂಡ್-ಟು-ಎಂಡ್ 70 ಸೇವೆಗಳನ್ನು ಒದಗಿಸಲಾಗುತ್ತಿದೆ. ಇದನ್ನು 2018ರ ಫೆಬ್ರವರಿ 21 ರಂದು ಪ್ರಾರಂಭಿಸಲಾಯಿತು. 2019 ರ ಫೆಬ್ರವರಿ 19 ಹೊತ್ತಿಗೆ, 29,000 ಕ್ಕೂ ಹೆಚ್ಚು ಅರ್ಜಿಗಳನ್ನು ಇದರ ಮೂಲಕ ಸ್ವೀಕರಿಸಲಾಗಿದ್ದು, ಇದರಲ್ಲಿ 22,000 ಕ್ಕೂ ಹೆಚ್ಚು ಅರ್ಜಿಗಳನ್ನು ಅನುಮೋದಿಸಲಾಗಿದೆ.
ತೆರಿಗೆ ಕಂದಾಯ ರಶೀದಿಗಳು
ಉತ್ತರ ಪ್ರದೇಶದ ಒಟ್ಟು ಆದಾಯವು 2016-17ರಲ್ಲಿ 256,875 ಕೋಟಿ ರೂ. ಆಗಿದ್ದು, ಇದು 2017-18ರಲ್ಲಿ 326,428 ಕೋಟಿ ರೂ.ಗೆ ಏರಿದೆ. 2018-2019ರ ಪರಿಷ್ಕೃತ ಬಜೆಟ್ ಆದಾಯ ರಶೀದಿ 439,525 ರೂ.ಗಳಾಗಿದ್ದು, ಇದು 2019-2020ರ ಬಜೆಟ್ನಲ್ಲಿ ಶೇಕಡಾ 7.1 ರಷ್ಟು ಹೆಚ್ಚಳವಾಗಿ 470,684 ಕೋಟಿ ರೂ.ಗೆ ತಲುಪಿದೆ.
2019-20ರ ಆದಾಯದ ಹೆಚ್ಚುವರಿ ಮೊತ್ತವನ್ನು ಶೇಕಡಾ 1.76 ಕ್ಕೆ ನಿಗದಿಪಡಿಸಲಾಗಿದೆ, ಇದು 2017-18ರಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದೆ, ಅಂದರೆ ಇದು ಶೇಕಡಾ 0.91 ಆಗಿದೆ. ಇದಲ್ಲದೆ, ಹಣಕಾಸಿನ ಕೊರತೆಯು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್ಆರ್ಬಿಎಂ) ಕಾಯ್ದೆಗೆ ಅನುಗುಣವಾಗಿರಲಿದೆ ಮತ್ತು ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 3 ರ ಅಡಿಯಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಆರೋಗ್ಯ ವೆಚ್ಚ
ರಾಜಕಾರಣಿಗಳು ತಮ್ಮ ಅಧಿಕಾರಕ್ಕೆ ಉತ್ತರಪ್ರದೇಶವನ್ನು ಕಾರಿಡಾರ್ ರೀತಿಯಲ್ಲಿ ಬಳಸಿಕೊಂಡಿದ್ದಾರೆ, ಆದರೆ ಈ ರಾಜ್ಯದ ಪ್ರಮುಖ ಅಂಕಿಅಂಶಗಳು ಪ್ರಪಾತಕ್ಕೆ ತಲುಪಿದ್ದವು. ಮಾನವ ಸಂಪನ್ಮೂಲಗಳ ಅಭಿವೃದ್ಧಿಯೊಂದೇ ರಾಜ್ಯದ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಏಕೈಕ ಮಾರ್ಗವೆಂದು ಬದ್ಧವಾಗಿ ನಂಬಿದ ಯೋಗಿ ಆದಿತ್ಯನಾಥ ಸರ್ಕಾರವು ಸಾಮಾಜಿಕ ಸೂಚಕಗಳನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
ನೀತಿ ಆಯೋಗದ ಆರೋಗ್ಯ ಸೂಚ್ಯಂಕ ವರದಿಯ ಪ್ರಕಾರ, ಉತ್ತರ ಪ್ರದೇಶವು NMR, U5MR, ಸಂಪೂರ್ಣ ಇಮ್ಯೂನೈಝೇಶನ್ ಕವರೇಜ್, ಸಾಂಸ್ಥಿಕ ವಿತರಣೆಗಳು ಮತ್ತು ಎಚ್ಐವಿ ಹೊಂದಿರುವ ಜನರು, antiretroviral therapy ಇತ್ಯಾದಿಗಳ ಮೂಲಕ ಆರೋಗ್ಯ ಫಲಿತಾಂಶಗಳಲ್ಲಿ ಗರಿಷ್ಠ ಸುಧಾರಣೆಗಳನ್ನು ಕಾಣುತ್ತಿರುವ ಟಾಪ್ 3 ರಾಜ್ಯಗಳ ಪೈಕಿ ಒಂದು.
ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ವೆಚ್ಚಕ್ಕಾಗಿ ಉತ್ತರ ಪ್ರದೇಶವು 2019-20ರಲ್ಲಿ 23,884 ಕೋಟಿ ರೂ.ಗಳನ್ನು ನಿಗದಿಪಡಿಸಿದೆ, ಇದು 2018-19ರ ಪರಿಷ್ಕೃತ ಬಜೆಟ್ನ ಅಂದಾಜು 20,735 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 15 ರಷ್ಟು ಹೆಚ್ಚಾಗಿದೆ. ಒಟ್ಟು ಖರ್ಚಿನ ಶೇಕಡಾ 5.4 ರಷ್ಟನ್ನು ಆರೋಗ್ಯಕ್ಕೆ ನಿಗದಿಪಡಿಸಲಾಗಿದೆ, ಇದು ಇತರ ರಾಜ್ಯಗಳ ಸರಾಸರಿ ಖರ್ಚುಗಿಂತ 5.2 ಶೇಕಡಾ ಹೆಚ್ಚಾಗಿದೆ.
ಕಾನೂನು ಸುವ್ಯವಸ್ಥೆ
ಉತ್ತರಪ್ರದೇಶದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಮೋದಿಯವರು ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ತಡೆಯಾಗುತ್ತದೆ ಎಂಬಂತೆ ಕೆಲವರು ಬಿಂಬಿಸಿದರು. ಆದರೆ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಆದಿತ್ಯನಾಥ್ ಅವರ ಆಡಳಿತವನ್ನು ನಿಸ್ಸಂದೇಹವಾಗಿ ಅನುಮೋದಿಸಿದ್ದಾರೆ..
ಈ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಶಕಗಳಿಂದಲೂ ಕಳವಳಕಾರಿ ಮಟ್ಟದಲ್ಲಿ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು, ರಾಜಕಾರಣಿಗಳ ಬೆಂಬಲ ಪಡೆಯುತ್ತಿದ್ದ ಕಾಂಟ್ರಾಕ್ಟ್ ಮಾಫಿಯಾವು ಈ ರಾಜ್ಯವನ್ನು ಪದೇ ಪದೇ ಮುಜುಗರಕ್ಕೀಡು ಮಾಡಿದೆ. ಆದರೂ, ಆದಿತ್ಯನಾಥ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ, ಅಪರಾಧವನ್ನು ತೊಡೆದುಹಾಕುವಲ್ಲಿ ಮತ್ತು ಅಪರಾಧಿಗಳನ್ನು ಮಟ್ಟಹಾಕುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಪೊಲೀಸ್ ವ್ಯವಸ್ಥೆಗೆ ಸ್ವಾತಂತ್ರ್ಯವನ್ನು ನೀಡಿ ಅಪರಾಧ ಮತ್ತು ಅಪರಾಧಿಗಳನ್ನು ಕಟ್ಟಿ ಹಾಕುತ್ತಿದ್ದಾರೆ.
ಹಲವಾರು ಎನ್ಕೌಂಟರ್ಗಳನ್ನು ಎರಡು ವರ್ಷಗಳಿಂದ ಯುಪಿಯಲ್ಲಿ ಮಾಡಲಾಗಿದೆ. ಇದಕ್ಕೆ ಹಲವಾರು ಮಂದಿ ಟೀಕೆಗಳನ್ನು ವ್ಯಕ್ತಪಡಿಸಿದರೂ ಕೂಡ ಹಿಂಜರಿಯದ ಯೋಗಿ ಅವರು ಅಪರಾಧಿಗಳಿಗೆ ನಮ್ಮ ರಾಜ್ಯದಿಂದ ತೊಲಗಿ ಇಲ್ಲವೇ ಮಡಿಯಿರಿ ಎಂಬ ದಿಟ್ಟ ಸಂದೇಶವನ್ನು ರವಾನಿಸಿದ್ದಾರೆ.
ರೈತರ ಉದ್ಧಾರಕ್ಕಾಗಿ ಮತ್ತು ಉತ್ತರಪ್ರದೇಶದ ಜನರ ಉತ್ತಮ ಬದುಕಿಗಾಗಿ ಯೋಗಿ ಆದಿತ್ಯನಾಥ ಅವರು ತೆಗೆದುಕೊಂಡು ಕೆಲವು ಮಹತ್ವದ ಕ್ರಮಗಳು ಇಲ್ಲಿವೆ.
- ಖಾಸಗಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರು ತಮ್ಮ ಬಾಕಿ ಹಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಯುಪಿ ಸರ್ಕಾರವು ಘಾಜಿಯಾಬಾದ್, ಬುಲಂದ್ಶಹರ್, ಹಾಪುರ್, ಸಹರಾನ್ಪುರ, ಬಡಾನ್, ಮಹಾರಾಜ್ಗಂಜ್, ಬಸ್ತಿ ಮತ್ತು ಬಾಗ್ಪತ್ ಜಿಲ್ಲೆಗಳಲ್ಲಿನ ಎಂಟು ಮಿಲ್ ಗಳಿಗೆ ರಿಕವರಿ ಸರ್ಟಿಫಿಕೇಟ್ ಅನ್ನು ನೀಡಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಈ ಸಕ್ಕರೆ ಕಾರ್ಖಾನೆಗಳ ಸ್ಥಿರ ಮತ್ತು ಚರಾ ಆಸ್ತಿಗಳನ್ನು ಮುಟ್ಟಗೋಲು ಹಾಕಿ ಅದರಿಂದ ಬರುವ ಹಣವನ್ನು ರೈತರಿಗೆ ನೀಡುವ ಅವಕಾಶವನ್ನು ನೀಡಿದೆ.
- ಈ ರಾಜ್ಯವು ಉಜ್ವಲ ಅಡಿಯಲ್ಲಿ ಅತಿ ಹೆಚ್ಚು ಎಲ್ಪಿಜಿ ಸಿಲಿಂಡರ್ಗಳನ್ನು, ಸ್ವಚ್ಛ ಭಾರತ ಯೋಜನೆಯಡಿ ಅತೀ ಹೆಚ್ಚು ಶೌಚಾಲಯಗಳನ್ನು ಮತ್ತು ಪ್ರಧಾನ್ ಮಂತ್ರಿ ಗ್ರಾಮನ್ ಆವಾಸ್ ಯೋಜನೆಯಡಿ ಗ್ರಾಮೀಣ ಮನೆಗಳನ್ನು ಪಡೆದುಕೊಂಡಿದೆ. ಆದಿತ್ಯನಾಥ್ ನೇತೃತ್ವದ ಸರ್ಕಾರವು ಈ ಕಲ್ಯಾಣ ಯೋಜನೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದೆ.
- ಖಾಸಗಿ ವಲಯದ ಭಾರತದ ಮೊದಲ ರೈಲು ಉದ್ಯಾನವನವನ್ನು 2018ರ ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದ ಫತೇಪುರದಲ್ಲಿ ಸ್ಥಾಪಿಸಲಾಯಿತು. ಇದು 50 ಕ್ಕೂ ಹೆಚ್ಚು ಕಂಪನಿಗಳಿಂದ 2,300 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುತ್ತಿದೆ ಮತ್ತು 20,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
- 2017 ರ ಮಾರ್ಚ್ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಮೂರು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದವು. ಉಡಾನ್ ಯೋಜನೆಯ ಸಹಯೋಗದೊಂದಿಗೆ, ಬಿಜೆಪಿ ಆಡಳಿತದ ಮೊದಲ 18 ತಿಂಗಳಲ್ಲಿ 11 ಹೊಸ ವಿಮಾನ ನಿಲ್ದಾಣಗಳನ್ನು ಸೇರಿಸಲಾಗಿದೆ.
ಆಲಸ್ಯದ ಅಧಿಕಾರಶಾಹಿಯನ್ನು ಕಂಡಿದ್ದ, ಅಭಿವೃದ್ಧಿಯಿಂದ ತೀರಾ ಹಿಂದುಳಿದಿದ್ದ ಉತ್ತರಪ್ರದೇಶವು ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯಾಗಿ ಪಡೆದ ಬಳಿಕ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.