ಮುಂಬಯಿ: ಪರಿಸರಕ್ಕೆ ಅಪಾಯಕಾರಿಯಾದಂತಹ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ಅನ್ನು ಡಿಕಿನ್ ಯೂನಿವರ್ಸಿಟಿಯ ಟೆಕ್ಸ್ಟೈಲ್ ಮತ್ತು ಫೈಬರ್ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಹತ್ತಿ ಮತ್ತು ಅದರ ಬೀಜಗಳ ತ್ಯಾಜ್ಯವನ್ನು ಬಯೋಡಿಗ್ರೇಡೇಬಲ್ ಮೆಟಿರಿಯಲ್ ಆಗಿ ಪರಿವರ್ತಿಸುವ ಕಲೆಯನ್ನು ಈ ವಿಜ್ಞಾನಿಗಳು ಕರಗತ ಮಾಡಿಕೊಂಡಿದ್ದಾರೆ.
ವಿಜ್ಞಾನಿಗಳ ತಂಡವು ಪುನರಾವರ್ತಿತ ಹತ್ತಿ ಜಿನ್ ಕಸದಿಂದ ಬಯೋಪ್ಲ್ಯಾಸ್ಟಿಕ್ಗಳನ್ನು ಅಭಿವೃದ್ಧಿಪಡಿಸಿದೆ. ಜಿನ್ನಿಂಗ್ ಪ್ರಕ್ರಿಯೆಯ ಬಳಿಕ ಉಳಿಯುವ ಬೀಜಗಳು, ಕಾಂಡಗಳು, ಸಣ್ಣ ನಾರುಗಳು ಮತ್ತು ಇತರ ತ್ಯಾಜ್ಯ ಉತ್ಪನ್ನಗಳನ್ನು ಬಳಸಿ ಫೈಬರ್ ಕಾಟನ್ಗಳನ್ನು ಬೇರ್ಪಡಿಸಿ ಬಳಿಕ ಬಯೋಪ್ಲಾಸ್ಟಿಕ್ ಆಗಿ ಪರಿವರ್ತಿಸಲಾಗಿದೆ.
ಪ್ರತಿವರ್ಷ ಸುಮಾರು 29 ದಶಲಕ್ಷ ಟನ್ ಹತ್ತಿ ಲಿಂಟ್ ಉತ್ಪತ್ತಿಯಾಗುತ್ತದೆ ಆದರೆ ಅದರಲ್ಲಿ ಮೂರನೇ ಒಂದು ಭಾಗದಷ್ಟು ಹತ್ತಿ ಜಿನ್ ಕಸವಾಗುತ್ತದೆ. ಬಳಿಕ ಈ ಕಸವನ್ನು ಸುಡಲಾಗುತ್ತದೆ ಅಥವಾ ಹೂಳಲಾಗುತ್ತದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಆದರೆ ಡೀಕಿನ್ ಯೂನಿವರ್ಸಿಟಿ ವಿಜ್ಞಾನಿಗಳು ಹತ್ತಿಯ ತ್ಯಾಜ್ಯಕ್ಕೆ ಪರಿಸರ ಸ್ನೇಹಿ ರಾಸಾಯನಿಕವನ್ನು ಬಳಸಿ, ಅದನ್ನು ಬಯೋ ಪ್ಲಾಸ್ಟಿಕ್ ಆಗಿ ಪರಿವರ್ತಿಸುವ ವಿಧಾನವನ್ನು ಕಂಡು ಹಿಡಿದಿದ್ದಾರೆ. 18 ತಿಂಗಳುಗಳ ನಿರಂತರವಾದ ಪ್ರಯತ್ನದ ಮೂಲಕ ಅವರು ಈ ಸಾಧನೆಯನ್ನು ಮಾಡಿದ್ದಾರೆ.
ಈ ಬಯೋಪ್ಲಾಸ್ಟಿಕ್ ಬಯೋಡಿಗ್ರೇಡೇಬಲ್ ಆಗಿದ್ದು, ಮಣ್ಣಿಗೆ ಸೇರಿದರೆ ಕರಗಿ ಹೋಗುತ್ತದೆ, ಪರಿಸರಕ್ಕೆ ಯಾವುದೇ ರೀತಿಯ ಅಪಾಯವನ್ನು ಉಂಟು ಮಾಡುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.