ನವದೆಹಲಿ: ಭಾರತೀಯ ನೌಕಾಪಡೆಯ ಹೆಮ್ಮೆಯ ಲೋಗೋದ ರಚನೆಯನ್ನು ನೌಕಾಸಿಬ್ಬಂದಿಗಳೇ ಅತ್ಯಂತ ಅದ್ಭುತವಾಗಿ ಮೂಡಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ನೌಕಾಸೇನೆ ಇದನ್ನು ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಫೋಟೋಗೆ ‘ಟೀಮ್ವರ್ಕ್ ಮೂಲಕ ಅದ್ಭುತ ಹೊರಹೊಮ್ಮುವಿಕೆ” ಎಂಬ ಶೀರ್ಷಿಕೆಯನ್ನು ನೀಡಿದೆ.
Joinindiannavy.gov.in ಮೂಲಕ ನೌಕಾಸೇನೆಯು ತನ್ನಲ್ಲಿನ ಹಲವಾರು ಹೊಸ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪರಿಶೀಲಿಸಬಹುದು ಮತ್ತು ಅದಕ್ಕಾಗಿ ಅರ್ಜಿ ಸಲ್ಲಿಸಬಹುದು. ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಮತ್ತು Artificer Apprentice (AA) ನಾವಿಕರಿಗೆ (ಎಎ) ಮತ್ತು ಸೀನಿಯರ್ ಸೆಕೆಂಡರಿ ನೇಮಕಾತಿ (ಎಸ್ಎಸ್ಆರ್) ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20, 2019. ಒಟ್ಟು 2700 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಹೆಚ್ಚಿನ ಹುದ್ದೆಗಳು ಎಸ್ಎಸ್ಆರ್ ಹುದ್ದೆಗಳಿಗಾಗಿವೆ.
ನೌಕಾಪಡೆಗೆ ಸೇರಲು ಮತ್ತು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸಲು ಬಯಸುವವರಿಗೆ ಇದು ಒಂದು ಸುವರ್ಣಾವಕಾಶವಾಗಿದೆ. ‘ನೌಕಾಪಡೆಯು ಕೆಲಸ ಅಥವಾ ವೃತ್ತಿಯಲ್ಲ. ಅದು ಒಂದು ಜೀವನ ವಿಧಾನ. ಆದ್ದರಿಂದ ನೀವು ಈ ಜೀವನವನ್ನು ನಡೆಸಲು ಬಯಸಿದರೆ ಶೀಘ್ರದಲ್ಲೇ ಅದರ ಭಾಗವಾಗಿ’ ಎಂದು ಹೇಳಲಾಗಿದೆ.
Join Indian Navy | Government of India
The Indian Navy is a well balanced and cohesive three dimensional force, capable of operating above, on and under surface of the oceans efficiently safeguarding our national interests
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.