ನವದೆಹಲಿ: ಕೃಷಿ, ಕೈಗಾರಿಕೆ ಮತ್ತು ದೇಶೀಯ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದ ಮಾದರಿಯಲ್ಲೇ ನೀರಿನ ಸಂರಕ್ಷಣೆಗಾಗಿ ಬೃಹತ್ ಜನ ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪ್ರತಿಪಾದಿಸಿದ್ದಾರೆ.
ಸ್ವಚ್ಛ ಮಹೋತ್ಸವ 2019 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಚ್ಛ ಭಾರತ ಅಭಿಯಾನದ ಯಶಸ್ಸು ಮತ್ತು ಯಶಸ್ಸಿಗೆ ಕೊಡುಗೆ ನೀಡಿದವರನ್ನು ಗೌರವಿಸುವ ಸಲುವಾಗಿ ಈ ಮಹೋತ್ಸವವನ್ನು ಆಯೋಜನೆಗೊಳಿಸಲಾಗಿದೆ. ಈ ವೇಳೆ ಸ್ವಚ್ಛ ಸುಂದರ್ ಶೌಚಾಲಯದ ವಿಜೇತರನ್ನು ಸಚಿವರು ಪುರಸ್ಕರಿಸುತ್ತಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಇದನ್ನು ಆಯೋಜನೆಗೊಳಿಸಿದೆ. ಅ.2ರಂದು ಗಾಂಧಿ ಜಯಂತಿಯಂದು ಸ್ವಚ್ಛ ಮಹೋತ್ಸವ ಸಮಾಪನಗೊಳ್ಳಲಿದೆ.
“ಒಂದು ವರ್ಷದ ಹಿಂದೆ, ಭಾರತದ ನೈರ್ಮಲ್ಯ ವ್ಯಾಪ್ತಿಯು 2019 ರ ವೇಳೆಗೆ ಶೇ.100 ರಷ್ಟನ್ನು ತಲುಪುತ್ತದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಇಂದು, ಸ್ವಚ್ಛ ಭಾರತ ಅಭಿಯಾನ ಪ್ರಾರಂಭವಾದ ಕೇವಲ ನಾಲ್ಕೂವರೆ ವರ್ಷಗಳಲ್ಲಿ ನೈರ್ಮಲ್ಯದ ಅಂಕಿ ಅಂಶ ಶೇ. 39 ರಿಂದ ಶೇ. 99 ಕ್ಕೆ ಏರಿಕೆಯಾಗಿದೆ. ಈ ಜನ ಆಂದೋಲನಕ್ಕೆ ಕೊಡುಗೆ ನೀಡಿದ ಮತ್ತು ಭಾರತವನ್ನು ವಿಶ್ವದ ಇತರ ಭಾಗಗಳಿಗೆ ಆದರ್ಶಪ್ರಾಯವಾಗಿಸಿದ ಎಲ್ಲರಿಗೂ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಎಂದಿದ್ದಾರೆ.
ವಿಶ್ವದ ಜನಸಂಖ್ಯೆಯ ಶೇ. 17 ರಷ್ಟು ಇರುವ ಭಾರತೀಯ ನಿವಾಸಿಗಳಿಗೆ ನೀರು ಒದಗಿಸಲು ನಮ್ಮ ಬಳಿ ವಿಶ್ವದ ಶೇ. 4 ರಷ್ಟು ನೀರು ಮಾತ್ರ ಇದೆ. ಭವಿಷ್ಯದಲ್ಲಿ ದೇಶಕ್ಕೆ ನೀರಿನ ಸಮಸ್ಯೆಯೇ ದೊಡ್ಡ ಸವಾಲಾಗಲಿದೆ ಎಂದರು. ಆದರೆ ಪ್ರಧಾನಮಂತ್ರಿಯ ದೃಷ್ಟಿಕೋನ ಮತ್ತು ಜನರ ಬೆಂಬಲದೊಂದಿಗೆ ಈ ಗುರಿಯನ್ನು ಕೂಡ ಸಾಧಿಸಬಹುದು ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.