ನವದೆಹಲಿ: ಯುರೋಪ್ ಅಥವಾ ಯುಎಸ್ ಬದಲು ಪೂರ್ವ ಏಷ್ಯಾ ದೇಶಗಳಲ್ಲಿನ ಅಭಿವೃದ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳುವತ್ತ ಮೋದಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸಿದೆ. ಈ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ಗೆ ದಕ್ಷಿಣ ಕೊರಿಯಾ ಆರೋಗ್ಯ ಯೋಜನೆಯ ಮಾದರಿಯನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ.
ಈಗಾಗಲೇ ಕೇಂದ್ರ ಸರ್ಕಾರವು ತನ್ನ 10 ತಿಂಗಳ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಗಾಗಿ ವಿವಿಧ ದೇಶಗಳಿಂದ ಪ್ರಮುಖ ಅಂಶಗಳನ್ನು ಪಡೆದುಕೊಂಡಿದೆ, ಆದರೆ ಈಗ ದಕ್ಷಿಣ ಕೊರಿಯಾದ ಸಾರ್ವತ್ರಿಕ ಆರೋಗ್ಯ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಕೊರಿಯಾದ ಆರೋಗ್ಯ ಯೋಜನೆಯು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ರಕ್ಷಣೆಯನ್ನು ಒಳಗೊಂಡಿದೆ.
“ದಕ್ಷಿಣ ಕೊರಿಯಾವು ತನ್ನ ಸಾರ್ವತ್ರಿಕ ಆರೋಗ್ಯ ಯೋಜನೆಯಲ್ಲಿ ಅಳವಡಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಅಧ್ಯಯನ ಮಾಡುವ ಪ್ರಸ್ತಾಪವನ್ನು ನಾವು ಹೊಂದಿದ್ದೇವೆ” ಎಂದು ಆಯುಷ್ಮಾನ್ ಭಾರತ್ ಸಿಇಒ ಇಂದೂ ಭೂಷಣ್ ಹೇಳಿದ್ದಾರೆ. ಅಧ್ಯಯನಕ್ಕಾಗಿ ಒಂದು ತಂಡವು ಶೀಘ್ರದಲ್ಲೇ ಕೊರಿಯಾಗೆ ಭೇಟಿ ನೀಡಲಿದೆ ಎಂದಿದ್ದಾರೆ.
ಕೊರಿಯಾದ ಜನಸಂಖ್ಯೆಯ ಸುಮಾರು ಶೇ.97ರಷ್ಟು ಜನರು ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಮತ್ತು ಉಳಿದ ಶೇ.3ರಷ್ಟು ಬಡವರು ಸರ್ಕಾರದ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಡಿ ಇದ್ದಾರೆ. ಹೆಚ್ಚು ಆದಾಯದ ದೇಶಗಳ ಪೈಕಿ ಕೊರಿಯಾವು ಆರೋಗ್ಯ ಲಭ್ಯತೆಯಲ್ಲಿ ಮೊದಲ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.