ನವದೆಹಲಿ: ತುರ್ತು ಪರಿಸ್ಥಿತಿಯ 44ನೇ ವರ್ಷವನ್ನು ದೇಶವಿಂದು ನೆನಪಿಸಿಕೊಳ್ಳುತ್ತಿದೆ. ಈ ಕರಾಳ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಡಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಮಾಡಿದ ವೀರರಿಗೆ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಈ ವೀಡಿಯೋಗೆ ಅವರು ತಮ್ಮದೇ ಆದ ಧ್ವನಿಯನ್ನು ನೀಡಿರುವುದು ವಿಶೇಷ.
ಈ ವೀಡಿಯೋ ಮೋದಿಯವರು ಸಂಸತ್ತಿನಲ್ಲಿ ತುರ್ತುಪರಿಸ್ಥಿತಿಯ ಬಗ್ಗೆ ಮಾಡಿದ ಹಳೆಯ ಭಾಷಣದ ಮೂಲಕ ಆರಂಭವಾಗುತ್ತದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವ ಅತ್ಯಂತ ಅಪಾಯದಲ್ಲಿತ್ತು, ಆದರೂ ದೇಶ ಭರವಸೆಯನ್ನು ಕಳೆದುಕೊಳ್ಳಲಿಲ್ಲ. “ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು ಮತ್ತು ಪ್ರತಿಪಕ್ಷಗಳ ಧ್ವನಿಯನ್ನು ಹುದುಗಿಸಲಾಯಿತು” ಎಂದು ವೀಡಿಯೋದಲ್ಲಿ ಮೋದಿ ಹೇಳುತ್ತಾರೆ.
ತುರ್ತು ಪರಿಸ್ಥಿತಿಯನ್ನು ಹೋಗಲಾಡಿಸಲು ಹೋರಾಟ ನಡೆಸಿದ ಎಲ್ಲಾ ಧೀರರಿಗೂ ಮೋದಿ ಸೆಲ್ಯೂಟ್ ಮಾಡಿದ್ದಾರೆ.
1.27 ನಿಮಿಷಗಳ ವೀಡಿಯೋ ಇದಾಗಿದ್ದು, “”ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ಮತ್ತು ನಿರ್ಭಯವಾಗಿ ವಿರೋಧಿಸಿದ ಎಲ್ಲ ಶ್ರೇಷ್ಠರಿಗೆ ಭಾರತ ನಮಸ್ಕರಿಸುತ್ತದೆ. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳು ಸರ್ವಾಧಿಕಾರಿ ಮನಸ್ಥಿತಿಯ ಮೇಲೆ ಯಶಸ್ವಿಯಾಗಿ ದಿಗ್ವಿಜಯ ಸಾಧಿಸಿವೆ” ಎಂದಿದ್ದಾರೆ.
India salutes all those greats who fiercely and fearlessly resisted the Emergency.
India’s democratic ethos successfully prevailed over an authoritarian mindset. pic.twitter.com/vUS6HYPbT5
— Narendra Modi (@narendramodi) June 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.