ಮೀರತ್: ಕಳೆದ ಒಂದು ವಾರದಲ್ಲಿ ಉತ್ತರಪ್ರದೇಶ ಪೊಲೀಸರು ಮೀರತ್ನಲ್ಲಿ 29 ಎನ್ಕೌಂಟರ್ಗಳನ್ನು ನಡೆಸಲಾಗಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ.
“ಕಳೆದ ವಾರದಲ್ಲಿ 29 ಎನ್ಕೌಂಟರ್ಗಳು ನಡೆದಿವೆ, ಇದರಲ್ಲಿ 40 ಜನರನ್ನು ಬಂಧಿಸಲಾಗಿದೆ, ಒಬ್ಬ ದುಷ್ಕರ್ಮಿ ಸಾವನ್ನಪ್ಪಿದ್ದಾನೆ ಮತ್ತು ಸುಮಾರು 24 ಮಂದಿ ಗಾಯಗೊಂಡಿದ್ದಾರೆ, ನಮ್ಮ 4 ಪೊಲೀಸ್ ಸಿಬ್ಬಂದಿಗಳು ಸಹ ಗಾಯಗೊಂಡಿದ್ದಾರೆ” ಎಂದು ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿದ್ದು, ರಾಜ್ಯವನ್ನು ಅಪರಾಧ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಯೋಗಿ ಸರ್ಕಾರ ಬಂದಾಗಿನಿಂದ ಹಲವಾರು ಎನ್ಕೌಂಟರ್ಗಳನ್ನು ನಡೆಸಲಾಗಿದ್ದು, ಅಪರಾಧಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ಭಯಭೀತಗೊಂಡಿರುವ ಅಪರಾಧಿಗಳು ಜೈಲಿನಿಂದ ಹೊರ ಬರಲು ಭಯಪಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.