ನವದೆಹಲಿ: ಜೂನ್ 27 ರಿಂದ 29 ರ ವರೆಗೆ ಜಪಾನಿನ ಒಸಾಕದಲ್ಲಿ ನಡೆಯಲಿರುವ 2019 ಜಿ20 ಒಸಾಕ ಸಮಿತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಜಪಾನಿನ ಒಸಾಕ ಪ್ರೆಫೆಕ್ಚರ್ನ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರಿನಲ್ಲಿ ಈ ಸಮಿತ್ ಜರುಗಲಿದೆ. ಇದರಲ್ಲಿ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಶರ್ಪಾ ಆಗಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
“ಈ ಸಲ ಆರನೇಯ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಿ20 ಸಮಿತ್ನಲ್ಲಿ ಭಾಗಿಯಾಗುತ್ತಿದ್ದಾರೆ. ಅವರು ದ್ವಿಪಕ್ಷೀಯ ಮಾತುಕತೆ ಮತ್ತು ಬಹುಪಕ್ಷೀಯ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ಬಗೆಗಿನ ದಿನಾಂಕಗಳು ಶೀಘ್ರದಲ್ಲಿ ನಿಗದಿಯಾಗಲಿದೆ” ಎಂದಿದ್ದಾರೆ.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುಕೆ ಮತ್ತು ಯುಕೆ ಯುಎಸ್ ಜಿ 20 ಸದಸ್ಯ ರಾಷ್ಟ್ರಗಳಾಗಿವೆ.
ಒಟ್ಟಾರೆಯಾಗಿ, ಜಿ -20 ಆರ್ಥಿಕತೆಗಳು ವಿಶ್ವದ ಒಟ್ಟು ಉತ್ಪನ್ನದ ಸುಮಾರು ಶೇ.90ರಷ್ಟನ್ನು, ವಿಶ್ವ ವ್ಯಾಪಾರದ ಶೇ.80ರಷ್ಟನ್ನು, ವಿಶ್ವ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಮತ್ತು ವಿಶ್ವ ಭೂಪ್ರದೇಶದ ಅರ್ಧದಷ್ಟು ಭಾಗವನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.