ಭುವನೇಶ್ವರ: ಬೆಳವಣಿಗೆ ಕಾಣುತ್ತಿರುವ ಭಾರತೀಯ ರಾಜ್ಯಗಳಲ್ಲಿ ಒರಿಸ್ಸಾ ಕೂಡ ಒಂದು. ಕ್ರೀಡೆ ಮತ್ತು ಗಣಿಗಾರಿಕೆಯೊಂದಿಗೆ ಒರಿಸ್ಸಾ ಸ್ಟಾರ್ಟ್-ಅಪ್ ಲೋಕದಲ್ಲಿಯೂ ತನ್ನದೇ ಆದ ಆಕಾರವನ್ನು ಪಡೆಯುತ್ತಿದೆ.
ಒರಿಸ್ಸಾ ನೈಸರ್ಗಿಕ ವಿಪತ್ತುಗಳಿಗೆ ಸುಲಭವಾಗಿ ತುತ್ತಾಗುವ ಅತ್ಯಂತ ದುರ್ಬಲ ರಾಜ್ಯಗಳಲ್ಲಿ ಒಂದಾಗಿದೆ. ಕಳೆದ ತಿಂಗಳಲ್ಲಿ ಒರಿಸ್ಸಾ ಫೋನಿ ಚಂಡಮಾರುತದಿಂದ ಭಾರೀ ಹೊಡೆತವನ್ನು ತಿಂದಿದೆ. ತನ್ನ ಕರಾವಳಿಯ ದುರ್ಬಲತೆಯನ್ನು ಅರಿತುಕೊಂಡಿರುವ ಒರಿಸ್ಸಾದ ಸರ್ಕಾರವು ತನ್ನ ವಿಪತ್ತು ನಿರ್ವಹಣಾ ಚೌಕಟ್ಟನ್ನು ಸುಧಾರಣೆಗೊಳಿಸುವ ಪಣ ತೊಟ್ಟಿದೆ.
ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿರುವ ಒರಿಸ್ಸಾ ಸರ್ಕಾರವು, ವಿಪತ್ತುಗಳನ್ನು ನಿರ್ವಹಿಸುವ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಸ್ಟಾರ್ಟ್ ಅಪ್ಗಳನ್ನು ತೊಡಗಿಸಿಕೊಳ್ಳುವ ನಿರ್ಧಾರವನ್ನು ಮಾಡಿದೆ. ಈ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುವ ಸಲುವಾಗಿ ಇತ್ತೀಚಿಗೆ ಒರಿಸ್ಸಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಅಡಿಯಲ್ಲಿ ‘ಸ್ಟಾರ್ಟ್-ಅಪ್ ಒರಿಸ್ಸಾ’ ಎಂಬ ಸೆಷನ್ ಒಂದನ್ನು ಆಯೋಜನೆಗೊಳಿಸಿತ್ತು. ಇದರ ಮೂಲಕ ವಿಪತ್ತು ನಿರ್ವಹಣೆಗೆ ಸ್ಟಾರ್ಟ್ ಅಪ್ಗಳನ್ನು ತೊಡಗಿಸುವ ಬಗ್ಗೆ ಚರ್ಚೆ ನಡೆಸಲು ವೇದಿಕೆ ಕಲ್ಪಿಸಲಾಯಿತು.
ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಸ್ಟಾರ್ಟ್ ಅಪ್ಗಳು ನಗರಗಳ ವಿವಿಧ ಭಾಗಗಳಲ್ಲಿ ನೀರಿನ ಮಟ್ಟವನ್ನು ಪತ್ತೆಹಚ್ಚಲು ರೊಬಸ್ಟ್ ಸೆನ್ಸಾರ್ ನಿರ್ಮಾಣ ಮಾಡುವ ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಪಂಪಿಂಗ್ ಕೇಂದ್ರಗಳನ್ನು ಸಕ್ರಿಯಗೊಳಿಸುವಂತಹ ಕೆಲಸಗಳಲ್ಲಿ ತೊಡಗಿಕೊಂಡಿವೆ. ನಗರದ ಮೂಲಸೌಕರ್ಯ, ಸಾರಿಗೆ ಮಾರ್ಗಗಳು ಮತ್ತು ಚೆಕ್ ಪಾಯಿಂಟ್ಗಳ ಸ್ಥಳಗಳ ಮೇಲೆ ಕಣ್ಗಾವಲನ್ನು ಇರಿಸಿ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನೀಡುವ ವ್ಯವಸ್ಥೆಯ ನಿರ್ಮಾಣ ಮತ್ತು ಆ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ನೆಟ್ವರ್ಕ್ನಲ್ಲಿ ನಿರ್ಮಿಸುವ ನಿಟ್ಟಿನಲ್ಲೂ ಸ್ಟಾರ್ಟ್ ಅಪ್ ಸಕ್ರಿಯಗೊಂಡಿವೆ.
ಭುವನೇಶ್ವರ ಮೂಲದ ಹೆಲ್ತ್ಕೇರ್ ಸ್ಟಾರ್ಟ್ ಅಪ್, ಬೆಸ್ಟ್ ರೇಇನ್ಫೋಟೆಕ್ಗಳು ಆಸ್ಪತ್ರೆಗಳಲ್ಲಿ ವಿಪತ್ತುಗಳ ಸಂದರ್ಭ ತ್ವರಿತ ರಕ್ತ ಪೂರೈಕೆಯನ್ನು ಕಾಯ್ದುಕೊಳ್ಳುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿವೆ. ಸ್ಟಾರ್ಟ್ ಅಪ್ ಒರಿಸ್ಸಾ ಈಗ ಇಂತಹ ಸ್ಟಾರ್ಟ್ ಅಪ್ಗಳನ್ನು ಸಂಬಂಧಿತ ಸರ್ಕಾರಿ ಇಲಾಖೆಗಳು ಮತ್ತು ಏಜೆನ್ಸಿಗಳೊಂದಿಗೆ ಸಂಪರ್ಕಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
“ಪ್ರತಿಯೊಂದು ಸಮಸ್ಯೆಯೂ ಒಂದು ಅವಕಾಶವನ್ನು ಸೃಷ್ಟಿಸುತ್ತದೆ. ಒರಿಸ್ಸಾ ವಿಪತ್ತು ಪೀಡಿತ ರಾಜ್ಯವಾಗಿರುವುದರಿಂದ ಸ್ಟಾರ್ಟ್ ಅಪ್ಗಳಿಗೆ ತಂತ್ರಜ್ಞಾನವನ್ನು ರಚಿಸಲು ದೊಡ್ಡ ಅವಕಾಶವಿದೆ. ಸ್ಟಾರ್ಟ್ ಅಪ್ಗಳಿಗೆ ವ್ಯಾಪಾರ ಮಾಡಲು ಮತ್ತು ಉದ್ಯೋಗ ಸೃಷ್ಟಿಸಲು ಅಪಾರ ಅವಕಾಶಗಳಿವೆ. ಫೋನಿ ಸೃಷ್ಟಿಸಿದ ಹಾನಿ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು ಪರಿಹಾರಗಳನ್ನು ನಿರ್ಮಿಸಲು ಅವಕಾಶಗಳನ್ನು ನೀಡಿದೆ. ಸ್ಟಾರ್ಟ್ಅಪ್ಗಳು ಜನರಿಗೆ ಮತ್ತು ಅಧಿಕಾರಿಗಳಿಗೆ ಪರಿಹಾರಗಳನ್ನು ಒದಗಿಸಬಲ್ಲವು ”. ಎಂದು ಸ್ಟಾರ್ಟ್-ಅಪ್ ಒರಿಸ್ಸಾ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
#Odisha has set global benchmark in handling disasters by strengthening institutional capacities, resilience and post disaster responses. Innovative solutions will help in building disaster resilient infrastructure and save precious lives.https://t.co/a4FCq9Gpkj
— CMO Odisha (@CMO_Odisha) June 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.