ನವದೆಹಲಿ: ಡಿಡಿ ಇಂಡಿಯಾ ಇನ್ನು ಮುಂದೆ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ್ಳಲ್ಲೂ ಲಭ್ಯವಾಗಲಿದೆ. ಈ ಬಗೆಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಎರಡೂ ದೇಶಗಳೊಂದಿಗೆ ಭಾರತ ಸಹಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದ ಬಿಟಿವಿ ವರ್ಲ್ಡ್ ಮತ್ತು ದಕ್ಷಿಣ ಕೊರಿಯಾದ ಕೆಬಿಎಸ್ ವರ್ಲ್ಡ್ ವಾಹಿನಿಗಳು ಭಾರತದ ಡಿಡಿ ಫ್ರೀ ಡಿಶ್ನಲ್ಲಿ ಲಭ್ಯವಾಗಲಿದೆ. ಫ್ರೀ ಡಿಶ್ ಸುಮಾರು 35 ಮಿಲಿಯನ್ ಗ್ರಾಹಕರನ್ನು ದೇಶದಾದ್ಯಂತ ಹೊಂದಿದೆ.
ಪ್ರಸಾರ ಭಾರತಿ ಮತ್ತು ಬಾಂಗ್ಲಾದೇಶ ಟಿವಿ ನಡುವೆ ಮೇ 7 ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಬಿಟಿವಿ ವರ್ಲ್ಡ್ ಪಶ್ಚಿಮಬಂಗಾಳದಲ್ಲಿ ಹೆಚ್ಚಿನ ವೀಕ್ಷಕರನ್ನು ಹೊಂದುವ ನಿರೀಕ್ಷೆ ಇದೆ. ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿಗೆ ತೆಗೆದುಕೊಂಡ ಮಹತ್ವದ ನಿರ್ಧಾರ ಇದಾಗಿದೆ.
ಉಭಯ ದೇಶಗಳು ಬಂಗ ಬಂಧು ಶೇಖ್ ಮುಜಿಬುರ್ ರೆಹಮಾನ್ ಮೇಲೆ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುವ ನಿರ್ಧಾರವನ್ನೂ ತೆಗೆದುಕೊಂಡಿದೆ, ಶ್ಯಾಂ ಬೆನೆಗಲ್ ಅವರು ಇದನ್ನು ನಿರ್ದೇಶನ ಮಾಡಲಿದ್ದಾರೆ.
“ಈ ಒಪ್ಪಂದವು ಭಾರತಕ್ಕೆ ನೆರೆಹೊರೆಯ ಮತ್ತು ಏಷ್ಯಾ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಮತ್ತು ಸಾಂಸ್ಕೃತಿಕ ವಿನಿಮಯವನ್ನು ವೃದ್ಧಿಸಲು ಸಹಾಯ ಮಾಡಲಿದೆ” ಎಂದು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.