ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಅತ್ಯಂತ ನಾವೀನ್ಯ ‘ಸಂಸದ ಧ್ವನಿ’ ವೇದಿಕೆಯನ್ನು ಆರಂಭಿಸಿದ್ದು, ಇಲ್ಲಿ ಕ್ಷೇತ್ರದ, ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯತಂತ್ರ ಮತ್ತು ನೀತಿಗಳ ಬಗ್ಗೆ ಸಂಸದರೊಂದಿಗೆ ಬಹಿರಂಗವಾಗಿ ಚರ್ಚೆಯನ್ನು ನಡೆಸಬಹುದಾಗಿದೆ.
ಸಂಸದ ಧ್ವನಿ ವೇದಿಕೆಯಡಿ ವರ್ಷ ಪೂರ್ತಿ ನಿರಂತರವಾಗಿ ಸಭೆಗಳು ನಡೆಯುತ್ತಿರುತ್ತವೆ. ಇಲ್ಲಿ ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಸಂಸದರಿಗೆ ಮಾಹಿತಿಯನ್ನು ನೀಡಬಹುದಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಕಾರ್ಯಗಳ ಪರಿಶೀಲನೆ, ಚರ್ಚೆ, ಪರಿಹಾರ ಕಂಡುಕೊಳ್ಳುವಿಕೆಗಳು ಇಲ್ಲಿ ನಡೆಯಲಿವೆ.
You all heard me so far, now it’s time I hear you out.
Here I present @SansadDhvani, a platform where the public can meet the MP, discuss the policies that are required for the development of the constituency, state and country.
Come participate & lend your voice to the MP! pic.twitter.com/mJPqsJkyAJ
— Tejasvi Surya (@Tejasvi_Surya) June 18, 2019
ಸಂಸದ ಧ್ವನಿ ವೇದಿಕೆಯನ್ನು ಆರಂಭಿಸಿರುವ ತೇಜಸ್ವಿ ಸೂರ್ಯ ಅವರು, ಕ್ಷೇತ್ರದ ಜನರ ಧ್ವನಿಯನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುವ ಭರವಸೆಯನ್ನು ತಮ್ಮನ್ನು ಆರಿಸಿದ ಜನರಿಗೆ ನೀಡಿದ್ದಾರೆ.
ಸಂಸದ ಧ್ವನಿಯ ಮೊದಲ ಸಭೆ ಜೂನ್ 15 ರಂದು ಜರುಗಿದ್ದು, ಕೆ. ಕಸ್ತೂರಿರಂಗನ್ ಅವರ ನೇತೃತ್ವದ ಸಮಿತಿ ರಚಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಕರಡು 2019ರ ಬಗ್ಗೆ ಇಲ್ಲಿ ಚರ್ಚೆ ನಡೆದಿದೆ. ಇದರಲ್ಲಿ ಸಮಿತಿ ಸದಸ್ಯರಾಗಿದ್ದ ಎಂ.ಕೆ ಶ್ರೀಧರ್, ಶಿಕ್ಷಣ ತಜ್ಞ ಟಿ.ವಿ ಮೋಹನದಾಸ್ ಪೈ ಮತ್ತು ಡಾ.ರೂಪಾ ವಾಸುದೇವನ್ ಮುಂತಾದವರು ಭಾಗವಹಿಸಿದ್ದರು. ಇದು ಭಾರೀ ಯಶಸ್ಸು ಕಂಡಿತ್ತು. ಈ ಕುರಿತ ವೀಡಿಯೋವನ್ನು ಸಂಸದ ತೇಜಸ್ವಿ ಸೂರ್ಯ ಟ್ವೀಟರ್ನಲ್ಲಿ ಇಂದು ಹಂಚಿಕೊಂಡಿದ್ದಾರೆ.
The first @SansadDhvani was on Draft National Education Policy 2019. Our education system is 150 years old & needs an immediate overhaul. Vision of Draft NEP 2019 is to make our education India centric. Glad that PM Modi ji has taken it up on priority. #SansadDhvani (1/n) pic.twitter.com/gEBzPaI5rj
— Tejasvi Surya (@Tejasvi_Surya) June 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.