ನವದೆಹಲಿ: ವಿವಾದಾತ್ಮಕ ರಾಜಕಾರಣಿ, AIMIM ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಮಂಗಳವಾರ ಲೋಕಸಭೆಯಲ್ಲಿ ಸಂಸದನಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಈ ವೇಳೆ ಸದನದಲ್ಲಿದ್ದ ಹಲವಾರು ಮಂದಿ ಜೈಶ್ರೀರಾಮ್, ವಂದೇ ಮಾತರಂ ಎಂಬ ಉದ್ಘೋಷವನ್ನು ಕೂಗಿದ್ದಾರೆ. ಪ್ರಮಾಣವಚನಕ್ಕೆ ಅವರ ಹೆಸರನ್ನು ಕರೆಯುತ್ತಿದ್ದಂತೆ ಈ ಉದ್ಘೋಷಗಳು ಮೊಳಗಲು ಆರಂಭಿಸಿದ್ದು, ಅವರು ಪೇಪರ್ಗೆ ಸಹಿ ಹಾಕುವವರೆಗೂ ಇದು ಮುಂದುವರೆದಿತ್ತು.
ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಓವೈಸಿ, ಜೈ ಭೀಮ್, ಜೈ ಹಿಂದ್ ಮತ್ತು ಅಲ್ಲಾಹು ಅಕ್ಬರ್ ಎನ್ನುತ್ತಾ ಪ್ರಮಾಣವಚನವನ್ನು ಅಂತ್ಯಗೊಳಿಸಿದರು. ಅವರು ಅಂತ್ಯಗೊಳಿಸುವವರೆಗೂ ಜೈಶ್ರೀರಾಮ್, ವಂದೇ ಮಾತರಂ ಉದ್ಘೋಷಗಳು ಜೋರಾಗಿ ಕೇಳಿ ಬಂದವು.
ಅಯೋಧ್ಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಸಮಾವೇಶವನ್ನು ನಡೆಸಿದ್ದ ವೇಳೆ, ಭಾಷಣವನ್ನು ಇದು ಪ್ರಭು ಶ್ರೀರಾಮ ಚಂದ್ರನ ಜನ್ಮಭೂಮಿ, ಜೈಶ್ರೀರಾಮ್ ಎಂದು ಮುಕ್ತಾಯಗೊಳಿಸಿದ್ದರು. ಅದರ ವಿರುದ್ಧ ಓವೈಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇಂದು ಬಿಜೆಪಿ ಸಂಸದರು ಓವೈಸಿ ಮುಂದೆ ವಂದೇ ಮಾತರಂ, ಜೈಶ್ರೀರಾಮ್ ಎಂದು ಉದ್ಘೋಷ ಹಾಕಿದ್ದಾರೆ.
Hyderabad AIMIM MP Barrister @asadowaisi takes oath in Lok Sabha. pic.twitter.com/objAfetEu6
— AIMIM Official (@aimim_national) June 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.