ನವದೆಹಲಿ: ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ಜೂನ್ 21 ರಂದು ಸಭೆ ಸೇರಲು ನಿರ್ಧರಿಸಿದ್ದು, ಈ ಸಭೆಯಲ್ಲಿ ತೆರಿಗೆ, ವಿವಿಧ ಸ್ಲ್ಯಾಬ್ ಮತ್ತು ಈ ಸ್ಲ್ಯಾಬ್ನ ಅಡಿಯಲ್ಲಿ ಬರುವ ವಸ್ತುಗಳ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಕಳೆದ ತಿಂಗಳು ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಜಿಎಸ್ಟಿ ಕೌನ್ಸಿಲ್ ಸಭೆ ಇದಾಗಿದ್ದು, 2019 ರ ಕೇಂದ್ರ ಬಜೆಟ್ ಮಂಡನೆಗೆ ಕೇವಲ ಎರಡು ವಾರಗಳ ಮೊದಲು ನಡೆಯಲಿದೆ.
ಜಿಎಸ್ಟಿ ಕೌನ್ಸಿಲ್ ಅಜೆಂಡಾದಲ್ಲಿ ನಡೆಯಲಿರುವ ಹಲವಾರು ಚರ್ಚೆಗಳಲ್ಲಿ, ಮಾನವ ಬಳಕೆಗಾಗಿ ಆಲ್ಕೊಹಾಲಿಕ್ ಲಿಕ್ಕರ್ ತಯಾರಿಸಲು ಬಳಸುವ ಎಕ್ಸ್ಟ್ರಾ ನ್ಯುಟ್ರಲ್ ಆಲ್ಕೋಹಾಲ್(ಇಎನ್ಎ) ಗೆ ಶೇ.18 ಜಿಎಸ್ಟಿ ವಿಧಿಸುವ ಪ್ರಸ್ತಾಪದ ಕುರಿತು ಕೂಡ ಪ್ರಮುಖ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜಿಎಸ್ಟಿ ಕೌನ್ಸಿಲ್ ಮುಂದೆ ಬರುವ ಮತ್ತೊಂದು ಪ್ರಮುಖ ವಿಷಯವೆಂದರೆ, ತೆರಿಗೆ ವಂಚನೆಯನ್ನು ಪರಿಶೀಲಿಸಲು ದೊಡ್ಡ ಕಂಪನಿಗಳು ಕಡ್ಡಾಯ ಇ-ಇನ್ವಾಯ್ಸಿಂಗ್ ಹೊಂದುವ ಪ್ರಸ್ತಾಪ. 50 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟಿಗೆ ಅಂತಹ ಇ-ಇನ್ವಾಯ್ಸ್ಗಳನ್ನು ಹೊಂದುವುದನ್ನು ಕಡ್ಡಾಯ ಮಾಡುವ ಪ್ರಸ್ತಾಪವಿದೆ.
ಜಿಎಸ್ಟಿ ಕೌನ್ಸಿಲ್ ಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವವನ್ನು ವಹಿಸಲಿದ್ದಾರೆ. ಜಿಎಸ್ಟಿ ತೆರಿಗೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಶೇ.28ರಷ್ಟು ತೆರಿಗೆ ಸ್ಲ್ಯಾಬ್ ಅಡಿಯಲ್ಲಿರುವ ವಸ್ತುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಸಭೆಯಲ್ಲಿ ಪರಿಗಣಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.