ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಬದ್ಧ ವೈರಿ ಪಾಕಿಸ್ಥಾನವನ್ನು 89 ರನ್ಗಳ ಮೂಲಕ ಸೋಲಿಸಿದ ಭಾರತ ಗೆಲುವಿನ ಸಂಭ್ರಮದಲ್ಲಿ ತೇಲಾಡಿದೆ. ಈ ಮೂಲಕ ಸತತ 7ನೇ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಐತಿಹಾಸಿಕ ದಾಖಲೆಯನ್ನು ಭಾರತ ಮಾಡಿದೆ. ಈ ಬಾರಿಯೂ ಭಾರತವನ್ನು ಮಣಿಸಲಾಗಲಿಲ್ಲವಲ್ಲ ಎಂಬ ಹತಾಶೆ ಪಾಕ್ ಆಟಗಾರರನ್ನು ಕಾಡಿದೆ.
ಮೊದಲು ಬ್ಯಾಟ್ ಮಾಡಿ ಟೀಂ ಇಂಡಿಯಾ 337 ರನ್ಗಳ ಟಾರ್ಗೆಟ್ ಅನ್ನು ನೀಡಿತ್ತು, ಇದನ್ನು ಬೆನ್ನತ್ತಿದ್ದ ಪಾಕಿಸ್ಥಾನ ಆಟಕ್ಕೆ ಮಳೆಯೂ ಅಡ್ಡಿಯಾಗಿತ್ತು. ಪಂದ್ಯದ 35 ಓವರ್ ವೇಳೆಗೆ ಪಾಕ್ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಾಗ ಮಳೆ ಶುರುವಾಗಿ ಪಂದ್ಯ ಕೆಲ ಕಾಲ ಸ್ಥಗಿತವಾಯಿತು. ಬಳಿಕ ಮಳೆ ನಿಂತು ಮತ್ತೆ ಪಂದ್ಯ ಆರಂಭವಾದಾಗ ಡಕ್ವರ್ತ್ ನಿಯಮದ ಅನ್ವಯ ಪಾಕ್ಗೆ ಗೆಲ್ಲಲು 30 ಎಸೆತಗಳಲ್ಲಿ 136 ರನ್ಗಳ ಟಾರ್ಗೆಟ್ ನೀಡಲಾಯಿತು. ಆದರೆ ಪಾಕಿಸ್ಥಾನದ ಆಟಗಾರರು ಈ ರನ್ ಪಡೆಯಲು ಅಶಕ್ತರಾದರು. ಇದರಿಂದಾಗಿ ಭಾರತಕ್ಕೆ 89 ರನ್ ಗಳ ವೀರೋಚಿತ ಗೆಲುವು ಸಿಕ್ಕಿತು.
ಪ್ರಸಕ್ತ ವಿಶ್ವಕಪ್ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿರುವ ಟೀಂ ಇಂಡಿಯಾ 7 ಅಂಕ ಪಡೆದು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೆ ಏರಿದೆ. ಇನ್ನು ಪಾಕ್ ಇದುವರೆಗೆ ಆಡಿದ ಐದು ಪಂದ್ಯದಲ್ಲಿ ಮೂರು ಸೋಲು ಕಂಡು 3 ಅಂಕಗಳೊಡನೆ ಒಂಬತ್ತನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಭಾರತ ಪಾಕ್ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಭಾರತೀಯರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಕೇಂದ್ರ ಗೃಹ ಸಚಿವೆ ಅಮಿತ್ ಶಾ ಅವರು ಟ್ವಿಟ್ ಮಾಡಿ, ಭಾರತೀಯ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. “ಟೀಮ್ ಇಂಡಿಯಾ ಪಾಕಿಸ್ಥಾನದ ಮೇಲೆ ಮತ್ತೊಂದು ದಾಳಿ ಮಾಡಿದೆ ಮತ್ತು ಫಲಿತಾಂಶ ಅದೇ ಆಗಿದೆ. ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಆಟಗಾರರಿಗೆ ಧನ್ಯವಾದಗಳು. ಪ್ರತಿ ಭಾರತೀಯನೂ ಈ ಬಗ್ಗೆ ಹೆಮ್ಮೆ ಪಡುತ್ತಿದ್ದಾನೆ ಮತ್ತು ಸಂಭ್ರಮಿಸುತ್ತಿದ್ದಾನೆ” ಎಂದಿದ್ದಾರೆ.
Another strike on Pakistan by #TeamIndia and the result is same.
Congratulations to the entire team for this superb performance.
Every Indian is feeling proud and celebrating this impressive win. #INDvPAK pic.twitter.com/XDGuG3OiyK
— Amit Shah (@AmitShah) June 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.