ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವೈದ್ಯರುಗಳು ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಂಧಾನಕ್ಕೆ ನೀಡಿದ ಆಹ್ವಾನವನ್ನು ಪ್ರತಿಭಟನೆನಿರತ ವೈದ್ಯರುಗಳು ತಿರಸ್ಕರಿಸಿದ್ದು, ಮೊದಲು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಶನಿವಾರಕ್ಕೆ ಇವರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಡುತ್ತಿದೆ.
ಕೋಲ್ಕತ್ತಾದ ಎನ್ ಆರ್ ಎಸ್ ಮೆಡಿಕಲ್ ಕಾಲೇಜಿನಲ್ಲಿ ರೋಗಿಗಳ ಸಂಬಂಧಿಗಳು ಇಬ್ಬರು ಕಿರಿಯ ವೈದ್ಯರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಮಮತಾ ಅವರು ತಪ್ಪಿತಸ್ಥರ ವಿರುದ್ಧ ಕೈಗೊಳ್ಳದೇ ವೈದ್ಯರುಗಳು ಮೇಲೆ ಗದಾ ಪ್ರಹಾರಕ್ಕೆ ಮುಂದಾಗಿದ್ದು ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ.
“ಮಮತಾ ಅವರ ಆಹ್ವಾನದಂತೆ ರಾಜಿ ಸಭೆಗಾಗಿ ನಾವು ಸೆಕ್ರೆಟರಿಯೇಟ್ಗೆ ತೆರಳುವುದಿಲ್ಲ. ಆಕೆಯೇ ಎನ್ ಆರ್ ಎಸ್ ಮೆಡಿಕಲ್ ಕಾಲೇಜಿಗೆ ಬರಬೇಕು ಮತ್ತು SSKM ಆಸ್ಪತ್ರೆಗೆ ತೆರಳಿದ್ದ ಸಂದರ್ಭ ಅವರು ನೀಡಿರುವ ಹೇಳಿಕೆಗೆ ಬೇಷರತ್ತು ಕ್ಷಮೆಯಾಚನೆ ಮಾಡಬೇಕು” ಎಂದು ಕಿರಿಯ ವೈದ್ಯರುಗಳ ಜಂಟಿ ವೇದಿಕೆ ವಕ್ತಾರ ಅರ್ನಿದಮ್ ದತ್ತ ಹೇಳಿದ್ದಾರೆ.
“SSKM ಆಸ್ಪತ್ರೆಗೆ ಹೋಗಿರುವ ಅವರಿಗೆ, ಎನ್ ಆರ್ ಎಸ್ ಆಸ್ಪತ್ರೆಗೂ ಬರಬಹುದು, ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಯಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.