ನವದೆಹಲಿ: ಬಿಹಾರದ ಸುಮಾರು 2100 ರೈತರ ಸಾಲವನ್ನು ತೀರಿಸಿದ ಮರುದಿನವೇ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ತಲಾ ರೂ.5 ಲಕ್ಷಗಳ ಹಣಕಾಸು ನೆರವನ್ನು ನೀಡಿದ್ದಾರೆ.
ದಾಳಿಯ ಬಳಿಕ ಅಮಿತಾಭ್ ಅವರು ಹುತಾತ್ಮ ಯೋಧರ ಕುಟುಂಬಗಳಿಗೆ ಹಣಕಾಸು ನೆರವನ್ನು ನೀಡುವುದಾಗಿ ಘೋಷಣೆ ಮಾಡಿದ್ದರು, ಇದೀಗ ಅವರು 40 ಮಂದಿಯ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನ್ನು ಹಂಚಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಅವರು, “ನನ್ನ ಮತ್ತೊಂದು ಭರವಸೆ ಈಡೇರಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಹಣಕಾಸು ನೆರವು ನೀಡಲು ಬಯಸಿದ್ದೆ, ಇದೀಗ ಅದನ್ನು ಈಡೇರಿಸಿದ್ದೇನೆ” ಎಂದಿದ್ದಾರೆ.
“ಸಿಆರ್ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಹೆಸರು, ವಿಳಾಸ ತಿಳಿದುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು, ಆದರೂ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಭಾರತ ಸರ್ಕಾರ ಮತ್ತು ಸಿಆರ್ಪಿಎಫ್ ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಗಳು ನಮ್ಮ ನೆರವಿಗೆ ಧಾವಿಸಿದವು” ಎಂದು ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಬುಧವಾರ, ಅಮಿತಾಭ್ ಅವರು ಬಿಹಾರದ 2100 ರೈತರ ಸಾಲಗಳನ್ನು ತೀರಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, “ಕೊಟ್ಟ ಮಾತು ಉಳಿಸಿದ್ದೇನೆ. ಸಾಲದಲ್ಲಿದ್ದ ಬಿಹಾರದ ಸುಮಾರು 2100 ರೈತರನ್ನು ಆಯ್ಕೆ ಮಾಡಿ ಅವರ ಬ್ಯಾಂಕ್ ಸಾಲ ತೀರಿಸಲಾಗಿದೆ” ಎಂದಿದ್ದಾರೆ.
ಸರಳ ಸಮಾರಂಭವೊಂದರಲ್ಲಿ ತಮ್ಮ ಪುತ್ರಿ ಶ್ವೇತಾ ನಂದ ಮತ್ತು ಪುತ್ರ ಅಬಭಿಷೇಕ್ ಬಚ್ಚನ್ ಅವರ ಮೂಲಕ ಹುತಾತ್ಮರ ಕುಟುಂಬದ ಸದಸ್ಯರಿಗೆ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.