ಸಿಡ್ನಿ: ಆಸ್ಟ್ರೇಲಿಯಾದ ಮೃಗಾಲಯದಲ್ಲಿದ್ದ ಸಿಬ್ಬಂದಿಗಳು ಗಿಡ್ಡ ಜಾತಿಯ ಮರ ಕಾಂಗರೂ ಒಂದರ ಮರಿಯನ್ನು ಇನ್ನೊಂದು ಜಾತಿಗೆ ಸೇರಿದ ಕಾಂಗರಿನೊಂದಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ಮೃಗಾಲಯದಲ್ಲಿ 5 ವಾರ ಪ್ರಾಯದ ಮಕೈ ಎಂಬ ಗುಡ್ಫೆಲೋ ಮರ ಕಾಂಗರೂ ಸಾವಿನ ಭೀತಿಯಲ್ಲಿತ್ತು. ಅದರ 3 ವರ್ಷದ ತಾಯಿ ಕಾಂಗರೂ ಮರದ ಗೆಲ್ಲೊಂದರಿದ ಬಿದ್ದು ನವೆಂಬರ್ನಲ್ಲಿ ಸಾವನ್ನಪ್ಪಿತ್ತು. ಹೀಗಾಗಿ ಮರಿ ಬದುಕುವ ಸಾಧ್ಯತೆ ಕಡಿಮೆ ಇತ್ತು.
ಆದರೆ ಮರಿಯನ್ನು ರಕ್ಷಿಸುವ ಪಣತೊಟ್ಟ ಮೃಗಾಲಯದ ಸಿಬ್ಬಂದಿಗಳು, ಅದನ್ನು ಅನ್ಯ ಜಾತಿಯ ಹಳದಿ-ಫುಟ್ರಾಕ್ ಹೆಣ್ಣು ಕಾಂಗರೂವಿನ ಹೊಟ್ಟೆ ಚೀಲದಲ್ಲಿ ಇರಿಸಿದ್ದರು. ಇದೊಂದು ವಿಭಿನ್ನ ಪ್ರಯತ್ನವಾಗಿತ್ತು. ಇದರಿಂದಾಗಿ ಮರಿ ಬದುಕುವಲ್ಲಿ ಸಫಲವಾಯಿತು.
ತನ್ನ ನೀಲಿ ಕಣ್ಣುಗಳು, ಉದ್ದನೆಯ ಉಗುರುಗಳು, ಕೆಂಪು-ಕಂದು ಬಣ್ಣದ ತುಪ್ಪಳ ಹೊಂದಿದ್ದ ಈ ಮರ ಕಾಂಗರೂ ತನ್ನ ಸಾಕುತಾಯಿಯ ಜೊತೆ ಆಕರ್ಷಕವಾಗಿ ಕಾಣುತ್ತಿದೆ ಎಂದು ಅಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.