ಇನ್ನೂ ಐದು ವರ್ಷಗಳ ಅವಧಿಗೆ ಅಜಿತ್ ದೋವಲ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮರು ನೇಮಕಗೊಂಡಿದ್ದಾರೆ, ಅದು ಕೂಡ ಸಂಪುಟ ಸ್ಥಾನಮಾನದೊಂದಿಗೆ. ಮೋದಿ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಉನ್ನತ ಆದ್ಯತೆಯನ್ನೇ ನೀಡಿದೆ ಎಂಬುದನ್ನು ಈ ಕ್ರಮ ಸಾಬೀತುಪಡಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ, ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ದೋವಲ್ ಅವರು ವಿದೇಶಿ ನಿಯಮ ಮತ್ತು ಕಾರ್ಯತಂತ್ರದಲ್ಲಿ ಅಸಾಧಾರಣ ದಾಖಲೆಯನ್ನು ಹೊಂದಿದ್ದಾರೆ. ಕಾರ್ಯಾಚರಣೆ ಅವರ ಪ್ರಮುಖ ಸಾಮರ್ಥ್ಯ, ಹಾಗಂತ ಅವರ ಕಾರ್ಯತಂತ್ರ, ಸಂಧಾನ ಕೌಶಲ್ಯ, ಬಲಿಷ್ಠ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಕಡಿಮೆಯೇನಲ್ಲ.
ಕಳೆದ ಹಲವು ವರ್ಷಗಳಿಂದ ದೇಶವನ್ನು ಹಲವು ಬಿಕ್ಕಟ್ಟುಗಳಿಂದ ಪಾರು ಮಾಡಿರುವ ಅವರು, ಭಯೋತ್ಪಾದನೆ ಮತ್ತು ಬಂಡಾಯದ ಪರಿಸ್ಥಿತಿಗಳನ್ನು ಆಯಾ ಪರಿಸ್ಥಿತಿಗೆ ಅನುಗುಣವಾಗಿ ನಿಭಾಯಿಸಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಅಸಂಬದ್ಧತೆಯಿಲ್ಲದ ದೃಢ ನಿರ್ಧಾರ ತೆಗೆದುಕೊಂಡಿರುವ ಅವರು, ಹೈಜಾಕ್ ಪ್ರಕರಣಗಳಲ್ಲೂ ಚಾಣಾಕ್ಷನಂತೆ ಸಂಧಾನಗಳನ್ನು ನಡೆಸಿದ್ದಾರೆ. ರಷ್ಯಾ, ದಕ್ಷಿಣ ಏಷ್ಯಾ ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ಭದ್ರತಾ ಮತ್ತು ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ನಿರ್ಮಾಣ ಮಾಡುವುದರಲ್ಲೂ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಉರಿ ಮತ್ತು ಬಾಲಾಕೋಟ್ ವೈಮಾನಿಕ ದಾಳಿ, ದೋಕ್ಲಾಂ ಬಿಕ್ಕಟ್ಟು ಮುಂತಾದ ವಿಷಯಗಳಲ್ಲಿ ಬಹುಪಾಲು ಶ್ರೇಯಸ್ಸು ಇವರಿಗೂ ಸಲ್ಲಬೇಕು. 2014ರಲ್ಲಿ ಇರಾಕ್ನಲ್ಲಿ ಇಸಿಸ್ ಉಗ್ರರ ಕಪಿಮುಷ್ಠಿಯಲ್ಲಿದ್ದ ಭಾರತದ 46 ನರ್ಸ್ಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದು ಇದೇ ಅಜಿತ್ ದೋವಲ್ ಅವರ ಯಶಸ್ವಿ ರಾಜತಾಂತ್ರಿಕ ಯೋಜನೆ.
ದೋವಲ್ ಅವರು ಬಾಹ್ಯ ಮತ್ತು ಆಂತರಿಕ ಭದ್ರತೆಗಳೆರಡಲ್ಲೂ ತಜ್ಞರಾಗಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸ್ಟ್ರ್ಯಾಟಜಿಕ್ ಪಾಲಿಸಿ ಗ್ರೂಪ್ (SPG)ಯನ್ನು ಮರುರಚನೆ ಮಾಡಿದ್ದು, ಇಂದು ಸಂಪುಟ ದರ್ಜೆಗೆ ಏರಿಸಿದ್ದು ಇವೆಲ್ಲವೂ ಇಂದು ನಾವು ಬಾಹ್ಯ ಮತ್ತು ಆಂತರಿಕ ಭದ್ರತಾ ವಿಷಯಗಳನ್ನು ನಿಭಾಯಿಸುವ ರಾಷ್ಟ್ರೀಯ ಭದ್ರತಾ ಸಚಿವರನ್ನು ಹೊಂದಿದ್ದೇವೆ ಎಂಬ ಭಾವವನ್ನು ನಮಗೆ ಮೂಡಿಸುತ್ತದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ SPG ಮರುನಿರ್ಮಾಣಗೊಂಡಾಗ, ದೋವಲ್ ಅವರು ಅದರ ಹೊಸ ಅಧ್ಯಕ್ಷರಾದರು, ವಿಶ್ಲೇಷಕರು ಇದನ್ನು “ಒಂದು ಹೊಸ ರೀತಿಯ ಭದ್ರತಾ ವಾಸ್ತುಶಿಲ್ಪ” ಎಂದು ಕರೆದರು.
ಹೊಸ SPG ಸದಸ್ಯರು ಕೇವಲ ಮೂರು ಸೇನಾಪಡೆಗಳ ಮುಖ್ಯಸ್ಥರು, ಐಬಿ ಮುಖ್ಯಸ್ಥರು, ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಗಳು, ಗೃಹ, ರಕ್ಷಣಾ, ಇಂಧನ, ಬಾಹ್ಯಾಕಾಶ ಕಾರ್ಯದರ್ಶಿಗಳು ಮಾತ್ರ ಆಗಿರಲಿಲ್ಲ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್, ನೀತಿ ಅಯೋಗ, ಆದಾಯ ಮತ್ತು ಹಣಕಾಸು ಕಾರ್ಯದರ್ಶಿಗಳು ಕೂಡ ಸದಸ್ಯರಾಗಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರರು SPG ನೇತೃತ್ವ ವಹಿಸಿದರು.
SPG ಮಾನ್ಯತೆ ಏನು? ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಲಹೆ ನೀಡುವುದು, ಆಂತರಿಕ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಾಷ್ಟ್ರೀಯ ಭದ್ರತಾ ನೀತಿಯನ್ನು ರೂಪಿಸುವಲ್ಲಿ ಮತ್ತು ತಂತ್ರಗಳನ್ನು ಸಂಯೋಜಿಸಲು ಇನ್ ಪುಟ್ ಗಳನ್ನು ಸಂಯೋಜಿಸುವುದು.
ಕೇವಲ ಆಂತರಿಕ ಭದ್ರತೆಗೆ ಮಾತ್ರವಲ್ಲ – ಆರ್ಥಿಕ ಭದ್ರತೆಗೂ ಸಹ ಸಂಬಂಧಿಸಿದ ನಿಯಮಗಳು ಎಂಬುದನ್ನು ನಾವಿಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕು.
ಮೋದಿ ಸರ್ಕಾರದ ಮೊದಲ ಅವಧಿಯ ಆರಂಭದಲ್ಲಿ, ದೋವಲ್ ಅವರು “ಆರ್ಥಿಕ ಅಭಿವೃದ್ಧಿಯು ಭದ್ರತೆಯನ್ನು ಖಾತ್ರಿಪಡಿಸುವ ಅತ್ಯುತ್ತಮ ಮಾರ್ಗವಾಗಿದೆ, ಮತ್ತು ಬಲವಾದ ಆರ್ಥಿಕತೆಯು ದೇಶವನ್ನು ರಕ್ಷಿಸುವ ಖಚಿತವಾದ ಮಾರ್ಗವಾಗಿದೆ ಮತ್ತು ಇದು ಭಾರತದ ರಕ್ಷಣೆಗಾಗಿ ಭರವಸೆಯನ್ನು ನೀಡುತ್ತದೆ” ಎಂದಿದ್ದರು.
ದೋವಲ್, ಅರ್ಥಶಾಸ್ತ್ರದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದುಕೊಂಡಿದ್ದಾರೆ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಅಂತರ-ಅವಲಂಬನೆಯ ಶಕ್ತಿಯನ್ನು ಬೆಳೆಸುವ ಚೌಕಟ್ಟಿನ ರೂಪದಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ. ಸಮೃದ್ಧ ಬರಹಗಾರರೂ ಆಗಿರುವ ಅವರು – ಇಂಡಿಯನ್ ಬ್ಲ್ಯಾಕ್ ಮನಿ ಅಬ್ರಾಡ್ ಸೀಕ್ರೆಟ್ ಬ್ಯಾಂಕ್ಸ್ ಮತ್ತು ಟ್ಯಾಕ್ಸ್ ಹೆವೆನ್ಸ್ ಎಂಬ ಕೃತಿಗಳನ್ನು ಇತರ ಮೂವರು ಲೇಖಕರೊಂದಿಗೆ ಸೇರಿ ಬರೆದಿದ್ದಾರೆ. ಆರ್ಥಿಕತೆ, ಆರ್ಥಿಕ ಭದ್ರತೆಯ ಬಗ್ಗೆ ಅವರಿಗೆ ಸ್ಪಷ್ಟವಾದ ಆಳವಾದ ಜ್ಞಾನ ಇದೆ ಎಂಬುದನ್ನು ಇದು ದೃಢಪಡಿಸುತ್ತದೆ.
ದೋವಲ್ ಅವರ ಗುರಿ ಕೇವಲ ರಾಷ್ಟ್ರೀಯ ಭದ್ರತೆಯನ್ನು ಸಾಧಿಸುವುದು ಮಾತ್ರವಲ್ಲ, ಆರ್ಥಿಕ ಬೆಳವಣಿಗೆ ಮತ್ತು ಭದ್ರತೆ, ದೇಶಕ್ಕೆ ಗೌರವ ಮತ್ತು ಜಗತ್ತಿನಲ್ಲಿ ಅದಕ್ಕೆ ಉತ್ತಮ ಸ್ಥಾನಮಾನ ದೊರಕಿಸುವ ಗುರಿಯೂ ಅವರದ್ದಾಗಿದೆ. ದೋವಲ್ ಅವರ ನೇತೃತ್ವದ ತಂಡ ಈಗ “ರಾಷ್ಟ್ರ ನಿರ್ಮಾಣ ಸಚಿವಾಲಯ’ದಂತೆ ಕಾಣಿಸುತ್ತಿದೆ. ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಿರುವುದು ಆಧುನಿಕ ಯುಗದ ‘ಚಾಣಾಕ್ಯ’ನಿಗೆ ಸಂದ ದೊಡ್ಡ ನ್ಯಾಯ ಎಂದೇ ಬಣ್ಣಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.