ನವದೆಹಲಿ: ಭಾರತೀಯ ಪ್ಯಾರಾ ವಿಶೇಷ ಪಡೆಗಳ ಬಲಿದಾನ ಸಂಕೇತವನ್ನು ತನ್ನ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದ ಎಂ.ಎಸ್ ಮಹೇಂದ್ರ ಸಿಂಗ್ ದೋನಿ ಅವರನ್ನು ಬೆಂಬಲಿಸಲು ಬಿಸಿಸಿಐ ನಿರ್ಧರಿಸಿದೆ. ಮಾತ್ರವಲ್ಲದೇ, ಈ ಸಂಕೇತವನ್ನು ಧರಿಸಲು ಧೋನಿ ಅವರಿಗೆ ಅನುಮತಿ ನೀಡಬೇಕೆಂದು ಅದು ಐಸಿಸಿಗೆ ಮನವಿಯನ್ನೂ ಮಾಡಿಕೊಳ್ಳಲು ನಿರ್ಧರಿಸಿದೆ.
ಧೋನಿ ಗ್ಲೌಸ್ ಮೇಲಿದ್ದ ಸಂಕೇತ ವಾಣಿಜ್ಯವೂ ಅಲ್ಲ ಮತ್ತು ಧಾರ್ಮಿಕವೂ ಅಲ್ಲ. ಹೀಗಾಗಿ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ಬಿಸಿಸಿಐ ಹೇಳಿಕೊಂಡಿದೆ. ಅಲ್ಲದೇ, ಅದಕ್ಕಾಗಿ ಅನುಮತಿಯನ್ನು ಪಡೆಯುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ತಿಳಿಸಿದೆ.
2019ರ ವಿಶ್ವಕಪ್ ಪಂದ್ಯದ ವೇಳೆ ಧೋನಿಯವರು ಸೇನೆಯ ಬಲಿದಾನ್ ಸಂಕೇತವುಳ್ಳ ಗ್ಲೌಸ್ ತೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಭಾರತೀಯರು ಧೋನಿಯ ದೇಶಪ್ರೇಮವನ್ನು ಕೊಂಡಾಡಿದ್ದರು. ಆದರೆ ಐಸಿಸಿ ಗ್ಲೌಸ್ನಲ್ಲಿ ಈ ಸಂಕೇತ ತೊಡದಂತೆ ಧೋನಿಗೆ ತಾಕೀತು ಮಾಡುವಂತೆ ಬಿಸಿಸಿಐಗೆ ಸೂಚನೆ ನೀಡಿತ್ತು.
ಆದರೆ ಬಿಸಿಸಿಐ ಧೋನಿ ಪರವಾಗಿ ನಿಂತು, ಅವರಿಗೆ ಸಂಕೇತವನ್ನು ಗ್ಲೌಸಿನಲ್ಲಿ ಹಾಕಿಕೊಳ್ಳಲು ಅಧಿಕೃತ ಅನುಮತಿಯನ್ನು ದೊರೆಕಿಸಿಕೊಡುವ ಪ್ರಯತ್ನದಲ್ಲಿದೆ.
ಧೋನಿ ಅವರು 2011ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್ನ ಗೌರವ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ಬಲಿದಾನ್ ಸಂಕೇತ ವಿಶೇಷ ಪಡೆಗಳ ವಿಶಿಷ್ಟ ಚಿಹ್ನೆಯಾಗಿದೆ. ಪ್ಯಾರಚೂಟ್ ರೆಜಿಮೆಂಟ್ ಕೂಡ ವಿಶೇಷ ಪಡೆಯ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.