ನವದೆಹಲಿ: ಇ-ಫಾರ್ಮಸಿ ವಲಯದ ಸಮಗ್ರ ಬೆಳವಣಿಗೆಯ ಹಂತವನ್ನು ಉತ್ತೇಜಿಸುವ ಸಲುವಾಗಿ, ಆರೋಗ್ಯ ಸಚಿವಾಲಯದ ಅಧಿಕಾರಿಗಳು ಜೂನ್ 10 ರಂದು ಉದ್ಯಮಕ್ಕೆ ಸಂಬಂಧಪಟ್ಟವರೊಂದಿಗೆ ಸಭೆಯನ್ನು ನಡೆಸಿ ಭಾರತದಲ್ಲಿ ಆನ್ಲೈನ್ ಔಷಧಾಲಯಗಳ ಔಪಚಾರಿಕ ಗುರುತಿಸುವಿಕೆ ಮತ್ತು ನಿಯಂತ್ರಣದ ನಿಯಮಗಳನ್ನು ಅಂತಿಮಗೊಳಿಸುವ ಬಗ್ಗೆ ಮಾತುಕತೆಯನ್ನು ನಡೆಸಲಿದ್ದಾರೆ.
ಹೊಸ ಸರ್ಕಾರವು ಇ-ಫಾರ್ಮಸಿ ಯೋಜನೆಯನ್ನು ತನ್ನ ಮೊದಲ 100 ದಿನಗಳ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸುವ ಆಶಯವನ್ನು ಹೊಂದಿದೆ. 2018 ರಲ್ಲೇ ಕರಡು ನಿಯಮಗಳನ್ನು ಮಾಡಲಾಗಿತ್ತು. ಸರ್ಕಾರದ ನಿರ್ಧಾರದಿಂದಾಗಿ ಭಾರತದ 50 ಕ್ಕಿಂತಲೂ ಹೆಚ್ಚು ಸ್ಟಾರ್ಟ್ ಅಪ್ಗಳಲ್ಲಿ ಹೊಸ ಭರವಸೆ ಮೂಡಿದೆ. ಭಾರತದಲ್ಲಿ ಆನ್ಲೈನ್ನಲ್ಲಿ ಔಷಧಿಗಳನ್ನು ಮಾರಾಟ ಮಾಡುವ ನೆಟ್ಮೆಡ್ಸ್, 1mg ಮತ್ತು ಫಾರ್ಮೆಸಿಗಳಂತೆಯೇ, ಈ ವಲಯಕ್ಕೆ ಅಗತ್ಯವಾದ ನಿಯಂತ್ರಣ ಸ್ಪಷ್ಟತೆಯನ್ನು ಅಭಿವೃದ್ಧಿಪಡಿಸುವುದನ್ನು ಅವುಗಳು ನಿರೀಕ್ಷೆ ಮಾಡುತ್ತಿವೆ.
ಪ್ರಸ್ತಾಪಿತ ಇ-ಫಾರ್ಮಸಿ ನಿಯಮಗಳು ಸೆಪ್ಟಂಬರ್ 2018 ಪೋಸ್ಟ್ನಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಳಿಗಾಗಿ ತೆರೆಯಲ್ಪಟ್ಟವು, ಕರಡು ಬೆಂಬಲಿಸಿ ಸರ್ಕಾರ 7,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್ ಅನ್ನು ಸ್ವೀಕರಿಸಿತು, ಆದರೆ ಆಫ್ಲೈನ್ ಕೆಮಿಸ್ಟ್ ಸಂಘಗಳು ಮತ್ತು ವ್ಯಕ್ತಿಗಳು ಇದನ್ನು ವಿರೋಧಿಸಿದರು. ಸುಮಾರು 350 ಕಾಮೆಂಟ್ಗಳು ಕರಡನ್ನು ವಿರೋಧಿಸಿವೆ.
ಭಾರತದಲ್ಲಿ ಇ-ಫಾರ್ಮಸಿ ವಲಯದ ಉತ್ತೇಜನವು ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಯೋಜನೆಗೆ ಮತ್ತಷ್ಟು ಸಹಾಯ ಮಾಡುತ್ತದೆ. ಅಲ್ಲದೆ, ಮೋದಿಯವರು 100 ದಿನಗಳಲ್ಲಿ ಆನ್ಲೈನ್ ಫಾರ್ಮಸಿ ವ್ಯಾಪಾರಕ್ಕೆ ಹುರುಪನ್ನು ನೀಡಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.