ನವದೆಹಲಿ: ದೇಶದಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೀಷ್ ಮತ್ತು ಉರ್ದು ಭಾಷೆಯಲ್ಲಿ ಟ್ವೀಟ್ ಮಾಡಿ ರಂಜಾನ್ ಶುಭಾಶಯ ಕೋರಿದ್ದಾರೆ. “ಈ ಶುಭ ದಿನ ನಮ್ಮ ಸಮಾಜದಲ್ಲಿ ಸೌಹಾರ್ದತೆ, ಸಹಾನುಭೂತಿ ಮತ್ತು ಶಾಂತಿಯ ಸ್ಪೂರ್ತಿಯನ್ನು ವೃದ್ಧಿಸಲಿ. ಎಲ್ಲರಿಗೂ ಸಂತೋಷ ಪ್ರಾಪ್ತಿಯಾಗಲಿ” ಎಂದಿದ್ದಾರೆ.
Have a blessed Id-ul-Fitr. pic.twitter.com/71R9GMW3Tf
— Narendra Modi (@narendramodi) June 5, 2019
ಮುಸ್ಲಿಂ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಅನ್ನು ಆಚರಣೆ ಮಾಡಲಾಗುತ್ತದೆ. ಇಡೀ ತಿಂಗಳು ಹಗಲಿನಲ್ಲಿ ಉಪವಾಸ ಇರುವ ಮುಸ್ಲಿಂ ಬಾಂಧವರು ಉಪವಾಸ ಕೊನೆಗೊಳ್ಳುತ್ತಿದ್ದಂತೆ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸುತ್ತಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟ್ವಿಟ್ ಮಾಡಿ, “ದೇಶದ ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಭಾರತದಲ್ಲಿರುವ ಮತ್ತು ವಿದೇಶದಲ್ಲಿರುವ ಮುಸ್ಲಿಂ ಸಹೋದರ ಮತ್ತು ಸಹೋದರಿಯರಿಗೆ ಈದ್ ಉಲ್ ಫಿತರ್ ಹಬ್ಬದ ಶುಭಾಶಯಗಳು. ಈ ಹಬ್ಬ ದಾನ, ಭಾತೃತ್ವ ಮತ್ತು ಸಹಾನುಭೂತಿಯ ಮೇಲಿನ ನಮ್ಮ ನಂಬಿಕೆಯನ್ನು ಇಮ್ಮಡಿಗೊಳಿಸುತ್ತದೆ. ಈ ಹಬ್ಬ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ಪ್ರಾಪ್ತಿ ಮಾಡಲಿ” ಎಂದಿದ್ದಾರೆ.
#EidMubarak to all fellow citizens, especially to our Muslim brothers and sisters in India and abroad. The festival of Idu’l Fitr strengthens our belief in charity, fraternity and compassion. May this happy occasion bring joy and prosperity to everyone’s lives #PresidentKovind
— President of India (@rashtrapatibhvn) June 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.