ನವದೆಹಲಿ: ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ (ಎನ್ಆರ್ಸಿ)ನ ಅಂತಿಮ ಪಟ್ಟಿ ಪ್ರಕಟವಾಗುವ ಜುಲೈ 31ರೊಳಗೆ 1,000 ಫಾರಿನರ್ಸ್ ಟ್ರಿಬ್ಯುನಲ್ಸ್ ಅನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರವು ಅಸ್ಸಾಂ ಸರ್ಕಾರಕ್ಕೆ ನೆರವು ನೀಡಲಿದೆ.
ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ನ ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದವರು ಈ ಟ್ರಿಬ್ಯುನಲ್ಸ್ಗಳಿಗೆ ಮೇಲ್ಮನವಿಯನ್ನು ಸಲ್ಲಿಸಿ ತಮ್ಮ ಹೆಸರು ಕೈಬಿಟ್ಟ ಬಗ್ಗೆ ಪ್ರಶ್ನೆ ಮಾಡಬಹುದು.
ಅಕ್ರಮ ನಿವಾಸಿಗಳು ಎಂದು ಘೋಷಿಸಲ್ಪಟ್ಟವರಿಗಾಗಿ ಇ-ಫಾರಿನರ್ಸ್ ಟ್ರಿಬ್ಯುನಲ್ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಯ ಬಗ್ಗೆ ಚರ್ಚಿಸಲು ಇತ್ತೀಚಿಗೆ ಗೃಹ ಸಚಿವಾಲಯದ ಕಾರ್ಯದರ್ಶಿ (ಗಡಿ ನಿರ್ವಹಣೆ) ಬಿ. ಆರ್. ಶರ್ಮಾ ಅವರು ಸಭೆಯನ್ನು ನಡೆಸಿದ್ದರು.
ಅಸ್ಸಾಂ ನಾಗರಿಕರನ್ನು ಗುರುತಿಸುವ ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ನ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಫಾರಿನರ್ಸ್ ಟ್ರಿಬ್ಯುನಲ್ ಅವಶ್ಯಕತೆ ಇರುತ್ತದೆ. ಇದನ್ನು ಸ್ಥಾಪನೆ ಮಾಡುವಲ್ಲಿ ಅಸ್ಸಾಂ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸಂಪೂರ್ಣ ನೆರವನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 30 ಲಕ್ಷದವರೆಗಿನ ಜನರು ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ನ ಅಂತಿಮ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.