ನವದೆಹಲಿ: ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಭಾರತವು ಅತ್ಯಂತ ಫಲದಾಯಕ ದ್ವಿಪಕ್ಷೀಯ ಬಾಂಧವ್ಯವನ್ನು ನಿರ್ವಹಣೆ ಮಾಡಿದೆ. ಭೌಗೋಳಿಕವಾಗಿ ದೂರವಿರುವ ಆದರೆ ರಾಜತಾಂತ್ರಿಕವಾಗಿ ಹತ್ತಿರದಲ್ಲಿರುವ ವಿದೇಶಗಳು ಸಮೃದ್ಧಿ ಮತ್ತು ಸ್ನೇಹದ ಹಿರಿಮೆಗೆ ಗರಿ ಮೂಡಿಸುತ್ತವೆ. ‘ನೆರೆಹೊರೆಯವರು ಮೊದಲು’ ನೀತಿಯನ್ನು ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಜೂನ್ 8ರಂದು ಮಾಲ್ಡೀವ್ಸ್ಗೆ ಭೇಟಿ ನೀಡುತ್ತಿದ್ದಾರೆ. ಎರಡನೇ ಬಾರಿಗೆ ಪ್ರಧಾನಿಯಾದ ಬಳಿಕದ ಇದು ಅವರ ಮೊದಲ ವಿದೇಶಿ ಪ್ರಯಾಣವಾಗಿದೆ.
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿಯವರು ಮಾಲ್ಡೀವ್ಸ್ ಅನ್ನು ತಮ್ಮ ಮೊದಲ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ಮತ್ತು ಮಾಲ್ಡೀವ್ಸ್ ನಡುವಣ ಉನ್ನತ ಮಟ್ಟದ ವಿನಿಮಯದಲ್ಲಿ ಹೊಸ ವೇಗವನ್ನು ಪಡೆಯಲಿದೆ. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ನಡೆದ ಮಹತ್ವಪೂರ್ಣ ಬೆಳವಣಿಗೆಯ ಮೇಲೆ ಮೋದಿಯವರ ಈ ಭೇಟಿ ಬೆಳಕು ಚೆಲ್ಲಲಿದೆ.
ಭೇಟಿಯ ವೇಳೆ ಮೋದಿಯವರು ಮಾಲ್ಡೀವ್ಸ್ನ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಅಲ್ಲಿನ ಸಂಸತ್ತಿನಲ್ಲಿ ಅವಿರೋಧವಾಗಿ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ.
ಮಾಲ್ಡೀವ್ಸ್ ಭೇಟಿಯ ಬಳಿಕ ಜೂನ್ 9 ರಂದು ಮೋದಿಯವರು ಶ್ರೀಲಂಕಾಗೆ ತೆರಳಲಿದ್ದಾರೆ. ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆಹ್ವಾನದ ಮೇರೆಗೆ ಈ ಭೇಟಿಯನ್ನು ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.