ನವದೆಹಲಿ: ಅಜಿತ್ ದೋವಲ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಆಗಿ ಎರಡನೇ ಅವಧಿಗೂ ಮುಂದುವರೆಯುತ್ತಿದ್ದಾರೆ. ಆದರೆ ಅವರಿಗೆ ನೀಡಲಾಗಿದ್ದ ರಾಜ್ಯ ಖಾತೆ ಸಚಿವ ಸ್ಥಾನವನ್ನು ಉನ್ನತೀಕರಿಸಿ ಸಂಪುಟ ದರ್ಜೆಯನ್ನು ಪ್ರದಾನ ಮಾಡಲಾಗಿದೆ. ಇನ್ನು ಮುಂದೆ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಗಲಿದೆ.
ಕಳೆದ ಐದು ವರ್ಷಗಳಿಂದ ದೇಶದ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ಅತ್ಯುನ್ನತ ಕೊಡುಗೆಗಳನ್ನು ಅವರು ನೀಡಿರುವ ಹಿನ್ನಲೆಯಲ್ಲಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬೀಳಬೇಕಿದೆ.
ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದ ದೋವಲ್ ಅವರು ತಮ್ಮ ಚಾಣಾಕ್ಷ್ಯ ಸಲಹೆಗಳಿಂದ ಸರ್ಕಾರದ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಎರಡನೇಯ ಅವಧಿಯಲ್ಲೂ ಅವರ ಸೇವೆ ಇದೇ ರೀತಿ ಮುಂದುವರೆಯುವ ವಿಶ್ವಾಸವಿದೆ.
1968ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅವರು ಇಂಟೆಲಿಜೆನ್ಸ್ ಬ್ಯುರೋದ ಮಾಜಿ ಮುಖ್ಯಸ್ಥರಾಗಿದ್ದಾರೆ. ಉರಿ ಭಯೋತ್ಪಾದನಾ ದಾಳಿ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮ ದಾಳಿಯ ಬಳಿಕ ನಡೆದ ಏರ್ ಸ್ಟ್ರೈಕ್ ಗಳ ಉಸ್ತುವಾರಿಯನ್ನು ಅಜಿತ್ ದೋವಲ್ ನೋಡಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.