ನವದೆಹಲಿ: ತಂತ್ರಗಾರಿಕ ಪಾಲುದಾರಿಕೆ, ಸಂಪನ್ಮೂಲ ಸನ್ನದ್ಧತೆ ಮತ್ತು ನಿರ್ವಹಣೆಯಲ್ಲಿ ಅನುಭವಿಯಾಗಿರುವ ಭಾರತೀಯ ಸಂಜಾತೆ ಅನಿತಾ ಭಾಟಿಯಾ ಅವರನ್ನು ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯ ಮೇಲೆ ಕೇಂದ್ರೀಕೃತವಾಗಿರುವ ವಿಶ್ವಸಂಸ್ಥೆಯ ಮಂಡಳಿಗೆ ಉಪ ಕಾರ್ಯಕಾರಿ ನಿರ್ದೇಶಕರಾಗಿ ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್ ಅವರು ನೇಮಕ ಮಾಡಿದ್ದಾರೆ.
ಭಾಟಿಯಾ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದುಕೊಂಡಿದ್ದಾರೆ. ಯೇಲ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಮತ್ತು ಜಾರ್ಜ್ಟೌನ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಜ್ಯೂರಿಸ್ ಡಾಕ್ಟರ್ ಪಡೆದುಕೊಂಡಿದ್ದಾರೆ.
ಲಿಂಗ ಸಮಾನತೆಗಾಗಿ ವಿಶ್ವಸಂಸ್ಥೆಯ ಯ್ಯಾಂಟಿಟಿ ಫಾರ್ ಜೆಂಡರ್ ಇಕ್ವಾಲಿಟಿ ಮತ್ತು ಮಹಿಳಾ ಸಬಲೀಕರಣ (ಯುಎನ್-ವುಮೆನ್)ನ ಸಂಪನ್ಮೂಲ ನಿರ್ವಹಣೆ, ಸಮರ್ಥನೀಯತೆ ಮತ್ತು ಪಾಲುದಾರಿಕೆಗಳಿಗಾಗಿ ಅವರು ನೇಮಕಗೊಂಡಿದ್ದಾರೆ. ಯುಎನ್ ವಕ್ತಾರರ ಕಚೇರಿ ಮತ್ತು ಯುಎನ್ ವುಮೆನ್ ಅವರ ನೇಮಕವನ್ನು ಪ್ರಕಟನೆಯ ಮೂಲಕ ಸ್ಪಷ್ಟಪಡಿಸಿದೆ.
ವಿಶ್ವ ಬ್ಯಾಂಕ್ ಗ್ರೂಪ್ನಲ್ಲಿ ಅವರು ಪ್ರಮುಖ ಹಿರಿಯ ನಾಯಕತ್ವ ಮತ್ತು ನಿರ್ವಹಣಾ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಟಿಯಾರವರು ಕಾರ್ಯತಂತ್ರದ ಪಾಲುದಾರಿಕೆ, ಸಂಪನ್ಮೂಲ ಸನ್ನದ್ಧತೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.