ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲು ಏನೂ ಸಿಗದ ಪ್ರತಿಪಕ್ಷಗಳು ಕೊನೆಗೆ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ತಮ್ಮ ಅಸ್ತ್ರವನ್ನಾಗಿಸಿಕೊಂಡವು. ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಹೇಳಿದವು, ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯನ್ನು ಛೋರ್ ಎಂದು ಹೋದಲ್ಲಿ ಬಂದಲ್ಲಿ ಕರೆಯಿತು. ಆದರೆ ಈ ಆರೋಪ ಅದಕ್ಕೆ ತಿರುಗು ಬಾಣವಾಯಿತು ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.
ಇದೀಗ ರಫೆಲ್ ಮತ್ತೊಂದು ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಕಾಡುವ ಸೂಚನೆ ದೊರೆತಿದೆ. ವಾಯುಸೇನೆ ಮುಖ್ಯಸ್ಥ ಬಿ. ಎಸ್. ಧನೋವಾ ಅವರ ದೆಹಲಿ ನಿವಾಸದ ಮುಂದೆ ರಫೆಲ್ ಯುದ್ಧವಿಮಾನದ ಮಾದರಿ ಪ್ರತಿಕೃತಿಯನ್ನು ಇಡಲಾಗಿದೆ. ಇದರಲ್ಲೇನು ವಿಶೇಷವೆಂದರೆ, ಧನೋವಾ ಅವರ ನಿವಾಸ ಕಾಂಗ್ರೆಸ್ ಕೇಂದ್ರ ಕಛೇರಿಯ ಮುಂಭಾಗದಲ್ಲೇ ಇದೆ.
ಅಂದರೆ, ಕಾಂಗ್ರೆಸ್ಸಿಗರು ಪ್ರತಿಬಾರಿ ಕಛೇರಿಗೆ ಹೋಗುವಾಗ, ಬರುವಾಗ ರಫೆಲ್ ಪ್ರತಿಕೃತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ!
ರಫೆಲ್ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಪ್ರಧಾನಿಯನ್ನು ಛೋರ್ ಎಂದು ಕರೆದು ಎರಡು ಬಾರಿ ಸುಪ್ರೀಂಕೋರ್ಟ್ನಿಂದ ಛಿಮಾರಿ ಹಾಕಿಕೊಂಡಿದ್ದ ರಾಹುಲ್ ಅವರ ಮುಂದಿನ ನಡೆ ಹೇಗಿರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ.
Replica of Rafale jet erected outside Air Chief Marshal BS Dhanoa’s residence in Delhi. His residence is next to Congress Headquarters. pic.twitter.com/Icoo63G2At
— ANI (@ANI) May 31, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.