ಹೈದರಾಬಾದ್ : ಹೈದರಾಬಾದ್ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಒಂದೇ ದಿನ ಏಕಾಂಗಿಯಾಗಿ 1,000 ಮಂದಿಗೆ ಆಹಾರವನ್ನು ಪೂರೈಕೆ ಮಾಡುವ ಮೂಲಕ ಯೂನಿವರ್ಸಲ್ ಬುಕ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ.
ಗೌತಮ್ ಕುಮಾರ್, ಹೈದರಾಬಾದ್ ಮೂಲದ ಎನ್ಜಿಓ ‘ಸರ್ವ್ ನೀಡಿ’ಯನ್ನು ಸ್ಥಾಪನೆ ಮಾಡಿದವರು, ನಿನ್ನೆ ಭಾನುವಾರ ಇವರು ವಿವಿಧ ಕಡೆಗಳಲ್ಲಿನ ಸುಮಾರು 1,000 ಮಂದಿಗೆ ಆಹಾರವನ್ನು ಪೂರೈಸುವ ಮೂಲಕ ದಾಖಲೆಯನ್ನು ಮಾಡಿದ್ದಾರೆ. ಗಾಂಧಿ ಹಾಸ್ಪಿಟಲ್, ರಾಜೇಂದ್ರ ನಗರ್ ಮತ್ತು ಅಮ್ಮ ನನ್ನ ವೃದ್ಧಾಶ್ರಮಗಳಿಗೆ ತೆರಳಿ ಇವರು ಕೈತುತ್ತು ನೀಡಿದ್ದಾರೆ.
ಯೂನಿವರ್ಸಲ್ ಬುಕ್ ಆಫ್ ರೆಕಾರ್ಡ್ಸ್ನ ಭಾರತೀಯ ಪ್ರತಿನಿಧಿ ಕೆವಿ ರಾಮಣ್ಣ ರಾವ್ ಮತ್ತು ತೆಲಂಗಾಣ ಪ್ರತಿನಿಧಿ ಟಿಎಂ ಶ್ರೀಲತಾ ಅವಾರ್ಡ್ ಅನ್ನು ಇವರಿಗೆ ಪ್ರದಾನ ಮಾಡಿದ್ದಾರೆ.
2014ರಲ್ಲಿ ಇವರು ಸರ್ವ್ ನೀಡಿ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು, ಇದರಲ್ಲಿ ಸುಮಾರು 140 ಸ್ವಯಂಸೇವಕರಿದ್ದಾರೆ. ಆಹಾರ ನೀಡುವಂತಹ ಕಾರ್ಯವನ್ನು ಇದರ ಮೂಲಕ ನಿರಂತರವಾಗಿ ಮಾಡುತ್ತಾ ಬರಲಾಗಿದೆ. ಆದರೆ ಭಾನುವಾರ ಗೌತಮ್ ಕುಮಾರ್ ಅವರು ಏಕಾಂಗಿಯಾಗಿ ಜನರಿಗೆ ಆಹಾರ ಪೂರೈಸಿದ್ದಾರೆ. ಇದು ವಿಶ್ವ ದಾಖಲೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.