ಸೂರತ್: ಗುಜರಾತಿನ ಸೂರತಿನಲ್ಲಿ ಕಳೆದ ಶುಕ್ರವಾರ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಢದಲ್ಲಿ ವಿದ್ಯಾರ್ಥಿಗಳ ಪ್ರಾಣವನ್ನು ಉಳಿಸಿದ ಕೇತನ್ ಜೊರಾವಾಡಿಯಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ. ತಮ್ಮ ಸ್ವಂತ ಪ್ರಾಣವನ್ನು ಪಣಕ್ಕಿಟ್ಟು ಅವರು ಇತರರ ಪ್ರಾಣ ರಕ್ಷಣೆಗೆ ಮುಂದಾದ ಅವರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸೂರತಿನ ಸರ್ತನಾ ಪ್ರದೇಶದ ಸೊಸೈಟಿಯೊಂದರಲ್ಲಿ ವಾಸಿಸುವ ಕೇತನ್, ಅವಘಢ ಸಂಭವಿಸಿದ ವೇಳೆ ಕಟ್ಟಡದ ಸಮೀಪ ಹಾದು ಹೋಗುತ್ತಿದ್ದರು. ದಟ್ಟವಾದ ಹೊಗೆ, ಆಕ್ರಂದನಗಳು ಕೇಳುತ್ತಿದ್ದಂತೆ ಏನಾಯಿತು ಎಂದು ಆಶ್ಚರ್ಯಚಕಿತಗೊಂಡರು, ಆ ವೇಳೆ ಇಬ್ಬರು ಯುವತಿಯರು ಕಟ್ಟಡದಿಂದ ಕೆಳಕ್ಕೆ ಜಿಗಿಯುತ್ತಿದ್ದನ್ನು ಕಂಡರು. ತಕ್ಷಣವೇ ಜಾಗೃತಗೊಂಡ ಅವರು, ಏಣಿಯೊಂದನ್ನು ತಂದು ಕಟ್ಟಡದ ಮೇಲೆ ಹತ್ತಿ ಹಲವು ಮಕ್ಕಳು ಬೆಂಕಿಗೆ ಆಹುತಿಯಾಗುವುದನ್ನು ತಪ್ಪಿಸಿದರು.
ಅವರ ಕಾರ್ಯಕ್ಕೆ ದೇಶದ ಮೂಲೆ ಮೂಲೆಯಿಂದಲೂ ಶ್ಲಾಘನೆಗಳು ಹರಿದು ಬರುತ್ತಿದೆ.
ತಕ್ಷಶಿಲಾ ಆರ್ಕೇಡ್ ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹಲವಾರು ಮಂದಿ ವಿದ್ಯಾರ್ಥಿಗಳು ಅಲ್ಲಿ ಹಾಜರಿದ್ದರು. ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿ ಅಗ್ನಿ ಅವಘಢ ಸಂಭವಿಸಿದೆ.
ಘಟನೆಯಲ್ಲಿ ಸುಮಾರು 22 ವಿದ್ಯಾರ್ಥಿಗಳು ಮೃತರಾಗಿದ್ದರು, ಎಲ್ಲರೂ 14ರಿಂದ 17 ವರ್ಷ ವಯಸ್ಸಿನವರು ಎಂದು ಹೇಳಲಾಗಿದೆ. ಬೆಂಕಿಯನ್ನು ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದಿಂದ ಹಾರಿ ಗಾಯಗೊಂಡೇ ಹಲವಾರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
Braveheart 🙏
Ketan Jorawadia climbed up to 2nd floor & saved life of 2 students yesterday in Takshshila complex #SuratFireTragedy
Putting his own life at risk in sure death zone & going all out to save lives of fellow citizen is an extraordinary bravery
Salute & Respect Ketan🙏 pic.twitter.com/9t6vTaGFTn— Major Surendra Poonia (@MajorPoonia) May 25, 2019
My heartfelt condolences to children who lost their lives in the tragic incident in Surat yesterday. Very proud of Ketan Jorawadia, who showed exemplary courage and saved atleast 2 children from falling in the fire. pic.twitter.com/dNW1qjb75o
— VVS Laxman (@VVSLaxman281) May 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.