ನವದೆಹಲಿ : 2019ರ ಲೋಕಸಭಾ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲ 542 ಲೋಕಸಭಾ ಕ್ಷೇತ್ರಗಳ ವಿಜೇತರ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗ ಪ್ರಕಟಿಸದೆ.
ಅಂತಿಮ ಹಂತದ ಪ್ರಕಾರ ಬಿಜೆಪಿ 303 ಸ್ಥಾನಗಳಲ್ಲಿ ದಾಖಲೆಯ ಜಯ ಸಾಧಿಸಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು 52 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಡಿಎಂಕೆ 23 ಸ್ಥಾನಗಳೊಂದಿಗೆ ಮೂರನೇ ಸ್ಥಾನ, ವೈಎಸ್ಆರ್ ಕಾಂಗ್ರೆಸ್ ಮತ್ತು ತೃಣಮೂಲ 22 ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದಿದೆ.
ಟಿಡಿಪಿ, ಜೆಡಿ(ಎಸ್) ಮತ್ತು ಆರ್ಜೆಡಿ ಸೇರಿದಂತೆ ಮುಂತಾದ ಪ್ರಾದೇಶಿಕ ಪಕ್ಷಗಳು ಈ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿವೆ. ಟಿಡಿಪಿ 3 ಸ್ಥಾನಗಳನ್ನು ಗೆದ್ದಿದೆ, ಜೆಡಿ (ಎಸ್) ಕೇವಲ ಒಂದು ಮತ್ತು ಆರ್ಜೆಡಿ ಪಕ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಯಾವುದೇ ಸ್ಥಾನವನ್ನು ಪಡೆದಿಲ್ಲ.
ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಒಡಿಶಾದಲ್ಲಿ 12 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಎಸ್ಪಿ 10 ಸ್ಥಾನ ಮತ್ತು ಉತ್ತರಪ್ರದೇಶದ ಹಿಂದಿನ ಪಕ್ಷ ಎಸ್ಪಿ ಕೇವಲ 5 ಸ್ಥಾನಗಳನ್ನು ಗೆದ್ದಿದ್ದಾರೆ.
ಬಿಜೆಪಿ ಮೈತ್ರಿಕೂಟಗಳಾದ ಶಿವಸೇನೆ ಮತ್ತು ಜೆಡಿ(ಯು) ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ)ಯ ಭಾಗವಾಗಲಿದೆ. ಶಿವಸೇನೆಯು 18 ಸ್ಥಾನಗಳನ್ನು ಗೆದ್ದು, ಜೆಡಿ(ಯು) 16 ಸ್ಥಾನಗಳನ್ನು ಗೆದ್ದುಕೊಂಡಿದೆ.
ದೆಹಲಿ, ಹರಿಯಾಣ ಮತ್ತು ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್ನೊಂದಿಗೆ ಸೇರಲು ಪ್ರಯತ್ನಿಸಿದ ಎಎಪಿ ಕೇವಲ ಒಂದು ಸೀಟ್ ಪಡೆದು ಸಮಾಧಾನಗೊಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.