ನವದೆಹಲಿ: ಟ್ಯಾಕೊ ಬೆಲ್ ಭಾರತವನ್ನು ತನ್ನ ಅತೀದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನಾಗಿಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ 600 ರೆಸ್ಟೋರೆಂಟ್ಗಳನ್ನು ಸ್ಥಾಪನೆ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಅಮೆರಿಕ ಮೂಲದ ಟ್ಯಾಕೋ ಬೆಲ್ ಹೇಳಿಕೊಂಡಿದೆ.
ಭಾರತದ ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಮತ್ತು ಏರುತ್ತಿರುವ ಮಧ್ಯಮವರ್ಗದ ವರ್ಗವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದೆ. ಟ್ಯಾಕೋ ಬೆಲ್ ನಿರ್ಧಾರದಿಂದಾಗಿ ಭಾರತದಲ್ಲಿ ಸುಮಾರು 20,000 ಉದ್ಯೋಗಗಳು ಸೃಷ್ಟಿಯಾಗಲಿದೆ.
ಈಗಾಗಲೇ ಟ್ಯಾಕೋ ಬೆಲ್ ಭಾರತದಲ್ಲಿ 35 ರೆಸ್ಟೋರೆಂಟ್ಗಳನ್ನು ಹೊಂದಿದೆ. ಭಾರತೀಯ ಕಂಪನಿ ಬರ್ಮನ್ ಹಾಸ್ಪಿಟಾಲಿಟಿಯೊಂದಿಗೆ ಮಾಸ್ಟರ್ ಫ್ರಾಂಚೈಸಿ ಅಗ್ರೀಮೆಂಟ್ ಅನ್ನು ಮಾಡಿಕೊಂಡಿದೆ. ಈ ವರ್ಷದ ಅಂತ್ಯದೊಳಗೆ ಪಾಲುದಾರಿಕೆಯೊಂದಿಗೆ ಭಾರತದಲ್ಲಿ 25 ರೆಸ್ಟೋರೆಂಟ್ಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ.
ಟ್ಯಾಕೋ ಬೇಲ್ ಮತ್ತು ಅದರ ಫ್ರಾಂಚೈಸಿಗಳು ಅಮೆರಿಕದಲ್ಲಿ 7000 ರೆಸ್ಟೋರೆಂಟ್ಗಳನ್ನು ನಡೆಸುತ್ತಿವೆ. ಅಂತರಾಷ್ಟ್ರೀಯ ಸ್ಥಳಗಳಲ್ಲಿ 500 ರೆಸ್ಟೋರೆಂಟ್ಗಳನ್ನು ನಡೆಸುತ್ತಿದೆ. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್ಗಳಲ್ಲಿ ಮುಂಬರುವ ವರ್ಷಗಳಲ್ಲಿ ಇದು ರೆಸ್ಟೋರೆಂಟ್ಗಳನ್ನು ತೆರೆಯಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.