ನವದೆಹಲಿ: ಕರ್ಜಿಸ್ತಾನದ ಬಿಶ್ಕೆಕ್ನಲ್ಲಿ ನಡೆದ ಶಾಂಘೈ ಕೊ-ಅಪರೇಶನ್ ಆರ್ಗನೈಝೇಶನ್ (SCO) ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾಗಿಯಾಗಿದ್ದರು. ಈ ವೇಳೆ ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಜ್ಞಾಪಿಸಿಕೊಂಡ ಅವರು, “ಪುಲ್ವಾಮ ದಾಳಿಯ ನಮ್ಮ ಗಾಯ ಇನ್ನೂ ಹಸಿಯಾಗಿದೆ, ಆದರೆ ನೆರೆಯ ರಾಷ್ಟ್ರದಲ್ಲಿ ನಡೆದ ದಾಳಿ ನಮ್ಮನ್ನು ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಲು ಮತ್ತಷ್ಟು ಅಚಲ ಶ್ರದ್ಧೆಯನ್ನು ನೀಡಿತು” ಎಂದಿದ್ದಾರೆ.
ಈ ಸಭೆಯಲ್ಲಿ ಭಾರತ ಭಯೋತ್ಪಾದನೆ, ಕನೆಕ್ಟಿವಿಟಿ ಮತ್ತು ಅಫ್ಘಾನಿಸ್ಥಾನ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ.
SCO ರಚನೆ ಮಾಡಿದ ಆ್ಯಂಟಿ ಟೆರರಿಸ್ಟ್ ಸ್ಟ್ರಕ್ಚರ್ ಅಥವಾ RATS ಭಯೋತ್ಪಾದನಾ ವಿರೋಧಿ ಸಹಕಾರಕ್ಕೆ ಅತೀದೊಡ್ಡ ವೇದಿಕೆಯಾಗಿದೆ. ಭಾರತ ಈ ವೇದಿಕೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಕರೆ ನೀಡಿದೆ. ಕನೆಕ್ಟಿವಿಟಿಗೆ ಸಂಬಂಧಿಸಿದಂತೆ ಭಾರತ 5 ಪ್ರಮುಖ ಕನೆಕ್ಟಿವಿಟಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದೆ. ಮುಂಬಯಿಯನ್ನು ಮಾಸ್ಕೋಗೆ ಕನೆಕ್ಟ್ ಮಾಡುವ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್, ಭಾರತವನ್ನು ಅಫ್ಘಾನಿಸ್ಥಾನದೊಂದಿಗೆ ಕನೆಕ್ಟ್ ಮಾಡುವ ಚಾಬಹಾರ್ ಪೋರ್ಟ್, ಏಷ್ಯಾ ಕನೆಕ್ಟಿವಿಟಿಯ ಅಶ್ಗಬತ್ ಒಪ್ಪಂದ, ಭಾರತ ಅಫ್ಘಾನಿಸ್ಥಾನದ ಏರ್ ಕಾರಿಡಾರ್ ಮತ್ತು ಭಾರತ-ಮಯನ್ಮಾರ್-ಥಾಯ್ಲೆಂಡ್ ಟ್ರೈಲ್ಯಾಟರ್ ಹೈವೇಗೆ ಒತ್ತು ನೀಡಿ ಭಾರತ ಮಾತನಾಡಿದೆ.
ಅಫ್ಘಾನಿಸ್ಥಾನವನ್ನು ಏಕೀಕರಿಸುವ, ಶಾಂತಿ ಸ್ಥಾಪಿಸುವ, ರಕ್ಷಿಸುವ, ಸ್ಥಿರತೆ ಕಾಪಾಡುವ, ಆರ್ಥಿಕವಾಗಿ ಬಲಗೊಳಿಸುವ ಯಾವುದೇ ಪ್ರಕ್ರಿಯೆಗೂ ಭಾರತ ಸಹಾಯ ಮಾಡಲಿದೆ ಎಂಬುದನ್ನು ಸುಷ್ಮಾ ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.