ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿ ಎಂದು ಚುನಾವಣಾ ಆಯೋಗ ಹೇಳಿದೆ. ದೇಶದಲ್ಲಿ ಒಟ್ಟು ಶೇ. 67.11 ರಷ್ಟು ಮತದಾನವಾಗಿದೆ. 2014ರಲ್ಲಿ ಶೇ.65.95ರಷ್ಟು ಮತದಾನವಾಗಿತ್ತು.
ದೇಶದ ಒಟ್ಟು 542 ಕ್ಷೇತ್ರದಲ್ಲಿ (ವೆಲ್ಲೂರ್ ಕ್ಷೇತ್ರದಲ್ಲಿ ಚುನಾವಣೆ ರದ್ದುಗೊಳಿಸಲಾಗಿದೆ) ಈ ವರ್ಷ ಮತದಾನವಾಗಿದೆ. ಎಲ್ಲಾ ಕಡೆಯು ಕಳೆದ ವರ್ಷಕ್ಕಿಂತ ಶೇ. 1.62ರಷ್ಟು ಮತದಾನದ ಪ್ರಮಾಣ ಹೆಚ್ಚಳವಾಗಿದೆ.
ಪಶ್ಚಿಮಬಂಗಾಳದಲ್ಲಿ ಅತೀ ಹೆಚ್ಚು ಮತದಾನ ಅಂದರೆ ಶೇ.81.91ರಷ್ಟು ಮತದಾನವಾಗಿದೆ. ಜಮ್ಮು ಕಾಶ್ಮೀರದಲ್ಲಿ ಅತೀ ಕಡಿಮೆ ಅಂದರೆ ಶೇ.29.39ರಷ್ಟು ಮತದಾನವಾಗಿದೆ.
1951ರ ಲೋಕಸಭಾ ಚುನಾವಣೆಯಲ್ಲಿ ಶೇ. 45.67, 1957 ರ ಲೋಕಸಭಾ ಚುನಾವಣೆಯಲ್ಲಿ ಶೇ. 47.74, 1962 ರಲ್ಲಿ ಶೇ.55.42, 1967 ರಲ್ಲಿ ಶೇ.61.33, 1971ರಲ್ಲಿ ಶೇ. 55.29, 1977 ರಲ್ಲಿ ಶೇ.60.49, 1980 ರಲ್ಲಿ ಶೇ.56.92, 1984-55 ರಲ್ಲಿ ಶೇ.64.01, 1989 ರಲ್ಲಿ ಶೇ.61.95, 1991-92ರಲ್ಲಿ ಶೇ.55.88, 1996ರಲ್ಲಿ ಶೇ.57.94, 1998ರಲ್ಲಿ ಶೇ.61.97, 1999ರಲ್ಲಿ ಶೇ.59.99, 2004ರಲ್ಲಿ ಶೇ.57.98, 2009ರಲ್ಲಿ ಶೇ.58.19, 2014ರಲ್ಲಿ ಶೇ. 65.95 ರಷ್ಟು ಮತದಾನವಾಗಿತ್ತು.
ಈ ಎಲ್ಲಾ ಚುನಾವಣೆಗಳನ್ನು ಹೋಲಿಸಿದರೆ 2019ರ ಲೋಕಸಭಾ ಚುನಾವಣೆಯಲ್ಲಿ ಅತೀಹೆಚ್ಚು ಅಂದರೆ ಶೇ.67.11ರಷ್ಟು ಮತದಾನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.