ಬೆಂಗಳೂರು: ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಚೆನ್ನೈನ ಸದರ್ನ್ ರೈಲ್ವೆ ವಲಯದಲ್ಲಿರುವಂತೆ ಎರಡೂ ಕಡೆ ಚಾಲನೆ ಮಾಡಬಹುದಾದ ’ಡ್ಯುಯೆಲ್ ಕ್ಯಾಬ್ ಇಂಜಿನ್’ಗಳನ್ನು ಬೆಂಗಳೂರು ರೈಲ್ವೆ ವಿಭಾಗಕ್ಕೆ ಅಳವಡಿಸಲಾಗಿದೆ.
ಇದರಿಂದ ಎರಡು ಬದಿ ಇಂಜಿನ್ ಮೂಲಕ ರೈಲು ಚಾಲನೆ ಮಾಡಬಹುದಾಗಿದ್ದು, ಅಪಘಾತಗಳನ್ನು ತಡೆಯಲು ಈ ಯೋಜನೆ ತರಲಾಗಿದೆ. ಬೆಂಗಳೂರು ವಿಭಾಗಕ್ಕೆ 300 ಕೋಟಿ ರೂ. ವೆಚ್ಚದ 10 ಲೋಕೊಮೋಟಿವ್ಗಳನ್ನು ಒದಗಿಸಲಾಗಿದ್ದು, ಲೋಕೊ ಪೈಲಟ್ಗಳಿಗೆ ಹೊಸ ಮಾದರಿ ಇಂಜಿನ್ ಚಾಲನೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಮೇರಿಕದ ಜನರಲ್ ಮೋಟಾರ್ಸ್ ಲಿ. ಸಹಯೋಗದೊಂದಿದೆ ಈ ಡುಯಲ್ ಕ್ಯಾಬ್ ಲೋಕೊಮೋಟಿವಗಳನ್ನು ವಾರಣಾಸಿಯ ಡೀಸೆಲ್ ಲೋಕೊಮೋಟಿವ್ಸ್ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ.
ಇಎಂಡಿ ರೈಲುಗಳಲ್ಲಿ ಕೇವಲ ಒಂದು ಕಡೆಯಲ್ಲಿ ಮಾತ್ರ ಚಾಲನೆ ಮಾಡುವ ಅವಕಾಶ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.