ನವದೆಹಲಿ: 1971ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಸೇನೆ ನಡೆಸಿದ ದಾಳಿಯನ್ನಾಧರಿಸಿ ಬಾಲಿವುಡ್ನಲ್ಲಿ ಸಿನಿಮಾವೊಂದು ನಿರ್ಮಾಣಗೊಳ್ಳುತ್ತಿದೆ. ರಝನೀಶ್ ಘಾಯ್ ಅವರು ‘ನೇವಿ ಡೇ’ ಎಂಬ ಹೆಸರಿನಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಜಾಹೀರಾತು ಇಂಡಸ್ಟ್ರೀಯಲ್ಲಿ ತುಂಬಾ ದೊಡ್ಡ ಹೆಸರನ್ನು ಹೊಂದಿರುವ ಘಾಯ್ ಅವರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ನೇವಿ ಡೇ’ ಸಿನಿಮಾಗೆ ಟಿ-ಸಿರೀಸ್ ಮತ್ತು ಇಲ್ಲಿಪ್ಸಿಸ್ ಎಂಟರ್ಟೈನ್ಮೆಂಟ್ ಇದನ್ನು ನಿರ್ಮಾಣ ಮಾಡುತ್ತಿದೆ. ಸದ್ಯ ಚಿತ್ರ ನಿರ್ಮಾಣದ ಯೋಜನೆಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷದಿಂದ ಕಾರ್ಯ ಆರಂಭವಾಗಲಿದೆ.
ಕರಾಚಿ ಬಂದರಿನ ಮೇಲೆ ಭಾರತ ನಡೆಸಿದ ಕಾರ್ಯಾಚರಣೆ ಭಾರತದ ನೌಕಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕಾರ್ಯಾಚರಣೆಯಾಗಿದೆ. ಇಲ್ಲಿ ಭಾರತದ ನೌಕಾಸೇನೆಗೆ ಯಾವುದೇ ಹಾನಿ ಉಂಟಾಗಿಲ್ಲ ಆದರೆ ಪಾಕಿಸ್ಥಾನಕ್ಕೆ ತೀವ್ರ ಸ್ವರೂಪದ ಹಾನಿಯುಂಟಾಗಿತ್ತು.
“ಭಾರತೀಯ ನೌಕೆ ನಡೆಸಿದ ಸರ್ವಶ್ರೇಷ್ಠ ಕಾರ್ಯಾಚರಣೆಯನ್ನಾಧರಿಸಿದ ಸಿನಿಮಾ ‘ನೇವಿ ಡೇ’ ಬಗ್ಗೆ ಘೋಷಣೆ ಮಾಡಲು ಅತ್ಯಂತ ಹೆಮ್ಮೆ ಪಡುತ್ತೇವೆ” ಎಂದು ಚಿತ್ರ ತಂಡ ಟ್ವಿಟ್ ಮಾಡಿದೆ.
Extremely delighted to announce “Navy Day”, our next venture celebrating the Greatest Naval Operation by the @indiannavy – the bombing of Karachi Harbour in 1971.
Helmed by Razneesh Ghai.@EllipsisEntt #KrishanKumar @tanuj_garg @atulkasbekar #SwatiIyer #AsylumFilms #NavyDay pic.twitter.com/7MKyCXeFAm— Bhushan Kumar (@itsBhushanKumar) May 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.