ಕ್ಯಾನೆಸ್: ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾರತ ಮತ್ತೊಮ್ಮೆ ಶೈನ್ ಆಗಿದೆ. ಮೂರು ನಿಮಿಷಗಳ ‘ಸೀಡ್ ಮದರ್’ ಎಂಬ ಭಾರತೀಯ ಕಿರುಚಿತ್ರ ಭಾನುವಾರ ರಾತ್ರಿ ಅಂತಾರಾಷ್ಟ್ರೀಯ ಸೆಕ್ಷನ್ ನೆಸ್ಪ್ರೆಸ್ಸೊ ಟ್ಯಾಲೆಂಟ್ಸ್ 2019 ರಲ್ಲಿ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಚ್ಯುತಾನಂದ್ ದ್ವಿವೇದಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾ ಮಹಾರಾಷ್ಟ್ರದ ಮಹಿಳೆ ರಹಿಬಾಯ್ ಪೊಪೆರೆ ಅವರ ಕಥೆಯನ್ನು ಈ ಕಿರುಚಿತ್ರ ಹೇಳುತ್ತದೆ. ಅಹ್ಮದ್ನಗರದವರಾದ ಈ ಮಹಿಳೆ ನೂರಾರು ವಿವಿಧ ದೇಶೀಯ ಬೀಜಗಳನ್ನು ಸಂರಕ್ಷಣೆ ಮಾಡಿದ್ದಾರೆ.
ನೆಸ್ಪ್ರೆಸ್ಸೊ ಟ್ಯಾಲೆಂಟ್ಸ್ ಎನ್ನುವುದು ಲಂಬವಾದ 9/16 ವೀಡಿಯೊ ಸ್ವರೂಪದಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳಿಗೆ ಸೀಮಿತವಾದ ಸ್ಪರ್ಧೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ. ಪ್ರಸ್ತುತ ವರ್ಷದ ಥೀಮ್ ‘ವಾಟ್ ಆರ್ ವಾಟ್ ವಿ ಈಟ್’. ಈ ವರ್ಷದ ಸ್ಪರ್ಧೆಯು 47 ದೇಶಗಳಿಂದ 371 ವೀಡಿಯೊಗಳನ್ನು ಮೂರು ವಿಸ್ತೃತ ವಿಭಾಗಗಳಲ್ಲಿ ಪಡೆದುಕೊಂಡಿದೆ: ‘ಕೃಷಿ ಮತ್ತು ಜೀವವೈವಿಧ್ಯ’, ‘ಆಹಾರ ಪರಂಪರೆ ಮತ್ತು ಮೌಲ್ಯ ಮಾಲೆ’ ಮತ್ತು ‘ಜನಪ್ರಿಯ ದೇಶಗಳಲ್ಲಿ ಆಹಾರ’ ಆ ಮೂರು ವಿಭಾಗಗಳಾಗಿವೆ.
If you shoot and edit it appropriately, there’s a world of story that can be told – What does it take to tell a story in the vertical format? @anupamachopra chats with the winner of #NespressoTalents2019 Achyutanand Dwivedi at #Cannes2019. #FCAtCannes @Festival_Cannes pic.twitter.com/LBYthlj6G7
— Film Companion (@FilmCompanion) May 18, 2019
ನ್ಯೂಜಿಲ್ಯಾಂಡಿನ ಜೋಶ್ ಮೊರಿಸ್ ಅವರ ‘ಸುಬಕ್’ ಪ್ರಥಮ ನೆಸ್ಪ್ರೆಸ್ಸೊ ಪ್ರಶಸ್ತಿ ಪಡೆದುಕೊಂಡರೆ, ಮೆಕ್ಸಿಕೋದ ಮಾರ್ಕೋ ಅರೆಲಿಯೋ ಸೆಲಿ ಅವರ ‘ರುಫೋ’ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ.
ರಹಿಭಾಯ್ ಅವರು ತಮ್ಮದೇ ಆದ ಸೀಡ್ ಬ್ಯಾಂಕ್ ಅನ್ನು ಹೊಂದಿದ್ದು, ಅಲ್ಲಿ ದೇಶೀ ಬೀಜಗಳನ್ನು ಸಂರಕ್ಷಣೆ ಮಾಡುತ್ತಾರೆ. ಆಕೆ ಆಧುನಿಕ ಹೈಬ್ರೀಡ್ ಬೀಜಗಳ ಕಟು ವಿರೋಧಿಯಾಗಿದ್ದಾರೆ. ಖ್ಯಾತ ವಿಜ್ಞಾನಿ ರಘುನಾಥ್ ಮಶಲ್ಕರ್ ಅವರು ಆಕೆಗೆ ‘ಸೀಡ್ ಮದರ್’ ಎಂಬ ಬಿರುದನ್ನು ನೀಡಿದ್ದಾರೆ.
ಪ್ರಶಸ್ತಿ ಮೂಲಕ ಬಂದ ಹಣದ 1/3 ರಷ್ಟನ್ನು ರಹಿಭಾಯಿ ಅವರಿಗೆ ನೀಡುವುದಾಗಿ ಅಚ್ಯುತಾನಂದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.