ನವದೆಹಲಿ: 900 ಮಿಲಿಯನ್ ಮತದಾರರು, 545 ಲೋಕಸಭಾ ಸ್ಥಾನಗಳು, ಮಿಲಿಯನ್ಗಟ್ಟಲೆ ಮತಗಟ್ಟೆಗಳು, 10 ಮಿಲಿಯನ್ ಚುನಾವಣಾ ಅಧಿಕಾರಿಗಳು, 464 ಪಕ್ಷಗಳು ಮತ್ತು ತಿಂಗಳು ಪೂರ್ತಿಯ ಪ್ರಚಾರ ಕಾರ್ಯ-ಭೂಮಿ ಮೇಲಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಮುಕ್ತಾಯದ ಹಂತದಲ್ಲಿದೆ.
ಭಾರತದ ಮೂಲೆ ಮೂಲೆಯೂ ವಿವಿಧ ಪಕ್ಷಗಳ 3000ಕ್ಕೂ ಅಧಿಕ ಸಮಾವೇಶ, ರೋಡ್ ಶೋಗಳನ್ನು ಕಂಡಿದೆ. ಪ್ರಧಾನಿ ನರೇಂದ್ರ ಮೋದಿಯವರೊಬ್ಬರೇ 200ಕ್ಕೂ ಅಧಿಕ ಸಮಾವೇಶಗಳನ್ನು ಆಯೋಜನೆಗೊಳಿಸಿದ್ದಾರೆ. ಆದರೆ ಈ ಹೋರಾಟ ಕೊನೆಗೆ ‘ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವರೇ” ಎಂಬ ಪ್ರಶ್ನೆಯಿಂದ “ಸದನದಲ್ಲಿ ಮತ್ತೊಮ್ಮೆ ಬಿಜೆಪಿಯೊಂದೇ ಸರಳ ಬಹುಮತವನ್ನು ಪಡೆಯಬಲ್ಲುದೇ” ಎಂಬತ್ತ ಶಿಫ್ಟ್ ಆಗಿದೆ.
7ನೇ ಹಂತದ ಚುನಾವಣೆಯ ಮತದಾರರು ಇನ್ನಷ್ಟೇ ಮತವನ್ನು ಚಲಾಯಿಸಬೇಕು, ಆದರೆ ಚುನಾವಣಾ ಪಂಡಿತರು ಮತ್ತು ರಾಜಕೀಯ ಶಾಸ್ತ್ರಜ್ಞರ ನಡುವಣ ಗೊಂದಲ ಮುಗಿಲುಮುಟ್ಟಿದೆ. ಅವರ ಗೊಂದಲ ಸರಳ ಮತ್ತು ಸಂಕೀರ್ಣವಾದುದಾಗಿದೆ, “ಮೋದಿ ಅಲೆ ಇದೆಯೇ ಅಥವಾ ಇಲ್ಲವೇ?”, “ಬಿಜೆಪಿ ಸರಳ ಬಹುಮತ ಪಡೆಯಬಲ್ಲುದೇ ಮತ್ತು ಮೋದಿ ಮತ್ತೆ ಪ್ರಧಾನಿಯಾಗುವರೇ? ಎಂಬುದಾಗಿದೆ.
ಚಾಣಾಕ್ಷ್ಯ ಮತದಾರರು ವಿಶ್ಲೇಷಕರನ್ನು ಗೊಂದಲಕ್ಕೀಡು ಮಾಡುತ್ತಿರುವುದಂತು ಸ್ಪಷ್ಟ. ಕಳೆದ ದಶಕ ಭಾರೀ ಪ್ರಮಾಣದಲ್ಲಿ ಮತ ವರ್ಗಾವಣೆಗಳನ್ನು ಕಂಡಿದೆ, ಅದರಲ್ಲೂ ಮುಖ್ಯವಾಗಿ ಬಿಜೆಪಿಗೆ. 2009 ಮತ್ತು 2014ರ ಚುನಾವಣೆಯನ್ನು ನಾವು ಹೋಲಿಕೆ ಮಾಡಿದರೆ, ಬಿಜೆಪಿಯ ಮತ ಹಂಚಿಕೆ ದೇಶದಾದ್ಯಂತದ 209 ಕ್ಷೇತ್ರಗಳಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಇದು ಭಾರತದ ಚುನಾವಣಾ ಇತಿಹಾಸದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಬದಲಾವಣೆಯು ಹೆಚ್ಚಾಗಿ ಕೇಂದ್ರೀಕರಿಸಿದ ರಾಜ್ಯಗಳೆಂದರೆ ಉತ್ತರಪ್ರದೇಶ (80ರ ಪೈಕಿ 64 ಸ್ಥಾನಗಳಲ್ಲಿ ಬಿಜೆಪಿ ಮತ ಹಂಚಿಕೆ ಶೇ.10ರಷ್ಟು ಹೆಚ್ಚಾಗಿದೆ), ಮಹಾರಾಷ್ಟ್ರ (48ರ ಪೈಕಿ 20 ಸ್ಥಾನಗಳಲ್ಲಿ), ರಾಜಸ್ಥಾನ (25ರ ಪೈಕಿ 19 ಸ್ಥಾನಗಳಲ್ಲಿ), ಪಶ್ಚಿಮಬಂಗಾಳ (42ರ ಪೈಕಿ 21 ಸ್ಥಾನಗಳಲ್ಲಿ), ಗುಜರಾತ್ (26ರ ಪೈಕಿ 16 ಸ್ಥಾನಗಳಲ್ಲಿ), ಮಧ್ಯಪ್ರದೇಶ (28ರ ಪೈಕಿ 18 ಸ್ಥಾನಗಳಲ್ಲಿ). ಈ ಆರು ರಾಜ್ಯಗಳಲ್ಲಿ ಬಿಜೆಪಿ 209 ಸ್ಥಾನಗಳ ಪೈಕಿ 158 ಸ್ಥಾನಗಳಲ್ಲಿ ಮತ ಹಂಚಿಕೆಯನ್ನು ಹೆಚ್ಚಳ ಮಾಡಿಕೊಂಡಿದೆ. ಈ 158 ಸ್ಥಾನಗಳ ಪೈಕಿ ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಪಶ್ಚಿಮಬಂಗಾಳದ 95 ಸ್ಥಾನಗಳಲ್ಲಿ ಬಿಜೆಪಿ ಮತ ಹಂಚಿಕೆ ಶೇ.15ರಷ್ಟು ಹೆಚ್ಚಳಗೊಂಡಿದೆ.
ಬಹುತೇಕ ಮಾಧ್ಯಮಗಳ ಗ್ರೌಂಡ್ ರಿಪೋರ್ಟ್ ಹೇಳಿದಂತೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಷ್ಟು ಮೋದಿ ಅಲೆ ಈಗ ಬಲಿಷ್ಠವಾಗಿದೆಯೇ ಮತ್ತು ಬಿಜೆಪಿ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳಬಹುದೇ? ಅಥವಾ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸಣ್ಣ ಪ್ರಮಾಣದ ಹಿನ್ನಡೆಯಾಗಬಹುದೇ? ಪಶ್ಚಿಮಬಂಗಾಳ ಬಿಜೆಪಿಯತ್ತ ತಿರುಗುತ್ತಿದೆಯೇ? ಒರಿಸ್ಸಾ ಬಿಜೆಡಿಯ ಪ್ರಾಬಲ್ಯವನ್ನು ಮುರಿಯಬಹುದೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಅಂದಾಜನ್ನು ಮಾಡುವ ಮೊದಲೇ ಯಾರು ಬೇಕಾದರೂ ಸುಲಭವಾಗಿ ಉತ್ತರಿಸಬಹುದಾಗಿದೆ.
ಮತ್ತೆ ಯಾಕೆ ತಡ? ಬನ್ನಿ ನಾವೇ ಅಂದಾಜಿಸೋಣ.
ಯಾವಾಗ ಚುನಾವಣೆಯು ಚುನಾವಣಾ ಪಂಡಿತರಿಗೆ ದುಃಸ್ವಪ್ನವಾಗುತ್ತದೋ, ಆದ ಓದುಗರಿಗೆ ತಮ್ಮದೇ ಆದ ಅಂದಾಜುಗಳನ್ನು ಮಾಡಲು ಸಕಾಲವಾಗಿರುತ್ತದೆ. ಮೇಲೆ ಒದಗಿಸಿದ ಸಂವಾದಾತ್ಮಕ ನಕ್ಷೆಯ ಮೂಲಕ ರಾಜ್ಯವನ್ನು ಆಯ್ಕೆ ಮಾಡಿ, ನಿಮ್ಮ ಅಂದಾಜಿನ ಪ್ರಕಾರ ಸ್ವಿಂಗ್ ಫ್ಯಾಕ್ಟರ್ ಅನ್ನು ಸರಿಹೊಂದಿಸಿ ಮತ್ತು ಸೇವ್ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.