ನವದೆಹಲಿ: ಅಮೆಝಾನ್ ಹಿಂದೂಗಳ ಸಹಿಷ್ಣುತೆ ಮತ್ತು ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸುತ್ತಲೇ ಇದೆ. ಹಿಂದೂ ಧರ್ಮಕ್ಕೆ ಅವಹೇಳನ ಮಾಡುವಂತಹ ಚಿತ್ರಗಳಿರುವ ಉತ್ಪನ್ನಗಳನ್ನು ಅದು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹಿಂದೂ ನಂಬಿಕೆಗಳಿಗೆ ಅವಮಾನ ಮಾಡಿದೆ. ಹಿಂದೂ ದೇವರುಗಳ ಚಿತ್ರವುಳ್ಳ ಟಾಯ್ಲೆಟ್ ಸೀಟ್, ಬಾತ್ ರೂಮ್ ಮ್ಯಾಟ್ಗಳು ಈಗ ಅಮೆಝಾನಿನಲ್ಲಿ ಖರೀದಿಗೆ ಲಭ್ಯವಿದೆ. ಇದರಿಂದ ಆಕ್ರೋಶಗೊಂಡಿರುವ ಹಿಂದೂಗಳು ಅಮೆಝಾನ್ ಅನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಟ್ವಿಟರ್ ಬಳಕೆದಾರ ಅನ್ಶುಲ್ ಸಕ್ಸೇನಾ ಅಮೆಝಾನಿನ ಈ ಕೃತ್ಯವನ್ನು ಬೆಳಕಿಗೆ ತಂದ ಬಳಿಕ #BoycottAmazon ಅಭಿಯಾನ ದೊಡ್ಡ ಮಟ್ಟದಲ್ಲಿ ಆರಂಭಗೊಂಡಿದೆ. ಅಮೆಝಾನ್ ಮಾರಾಟಕ್ಕಿಟ್ಟಿರುವ ಹಿಂದೂ ದೇವರ ಚಿತ್ರಗಳನ್ನು ಒಳಗೊಂಡಿರುವ ಉತ್ಪನ್ನಗಳ ಫೋಟೋಗಳನ್ನು ಅನ್ಶುಲ್ ಅವರು ಪೋಸ್ಟ್ ಮಾಡಿದ್ದಾರೆ. ಹಿಂದೂಗಳ ಭಾವನೆಗಳಿಗೆ ಎಷ್ಟು ಬಾರಿ ನೋವುಂಟು ಮಾಡುತ್ತೀರಾ? ಪ್ರತಿ ವರ್ಷ, ಪ್ರತಿ ಬಾರಿ ಇದನ್ನೇ ಯಾಕೆ ಮಾಡುತ್ತೀರಿ? ಎಲ್ಲಿಯವರೆಗೆ ಇದು ಮುಂದುವರೆಯುತ್ತದೆ? ಇನ್ನಾದರೂ ಇದು ನಿಲ್ಲಬಹುದೇ? ಎಂದು ಪ್ರಶ್ನಿಸಿದ್ದಾರೆ.
2016 ರಲ್ಲೂ ಅಮೆಝಾನ್ ಇಂತಹ ಕೃತ್ಯವನ್ನು ಮಾಡಿತ್ತು, ಬಳಿಕ ಭಾರೀ ವಿರೋಧ ವ್ಯಕ್ತವಾದ ಬಳಿಕ ಅದು ಉತ್ಪನ್ನಗಳನ್ನು ಹಿಂಪಡೆದಿತ್ತು.
ಈ ಉತ್ಪನ್ನಗಳು ಭಾರತದಲ್ಲಿ ಮಾರಾಟಕ್ಕಿಲ್ಲ. ಆದರೆ ವಿದೇಶದಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ. ಆದರೀಗ ಭಾರತದಿಂದಲೇ #BoycottAmazon ಆರಂಭಗೊಂಡಿದೆ. ಇದೀಗ ಅಮೆಝಾನ್ ಉತ್ಪನ್ನಗಳನ್ನು ತನ್ನ ವೇದಿಕೆಯಿಂದ ಡಿಲೀಟ್ ಮಾಡಿದೆ ಎನ್ನಲಾಗಿದೆ.
What the hell is this Amazon? (@AmazonHelp, @amazon)
How many times you will hurt the sentiments of Hindus? Why do you do this every year, every time? Till when will this continue? Will it ever stop? pic.twitter.com/XuwlHHu4qY
— Anshul Saxena (@AskAnshul) May 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.