ನವದೆಹಲಿ: ಒಂದೇ ಒಂದು ಸಂಚಾರವನ್ನು ತಪ್ಪಿಸಿಕೊಳ್ಳದೆ, ಒಂದೇ ಒಂದು ನಿಮಿಷ ವಿಳಂಬ ಮಾಡದೆ ದೇಶೀಯವಾಗಿ ನಿರ್ಮಾಣಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್ ಒಂದು ಲಕ್ಷ ಕಿಲೋಮೀಟರ್ ಸಂಚಾರವನ್ನು ಪೂರ್ಣಗೊಳಿಸಿದೆ. ಮಾತ್ರವಲ್ಲ, ದೆಹಲಿ-ಪ್ರಯಾಗ್ ರಾಜ್ ಮಾರ್ಗವಾಗಿ ಗಂಟೆಗೆ 100 ಕಿಮೀ ಸರಾಸರಿ ವೇಗದಲ್ಲಿ ಸಂಚರಿಸಿದ ದೇಶದ ಮೊದಲ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 15 ರಂದು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆಯನ್ನು ನೀಡಿದ್ದರು. ನವದೆಹಲಿ ಮತ್ತು ವಾರಣಾಸಿಯ ನಡುವೆ ಇದು ಸಂಚರಿಸುತ್ತದೆ. ಬುಧವಾರ ಇದು 1 ಲಕ್ಷ ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದೆ. ಮೂರು ತಿಂಗಳಲ್ಲಿ ಇದು ಒಂದೇ ಒಂದು ಸಂಚಾರವನ್ನು ಮಿಸ್ ಮಾಡಿಕೊಂಡಿಲ್ಲ ಎಂದು ರೈಲ್ವೇಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಫೆ.15 ರಂದು ಮೊದಲ ಸಂಚಾರದಲ್ಲೇ ವಾರಣಾಸಿಯಿಂದ ವಾಪಾಸ್ ಬರುತ್ತಿರುವ ವೇಳೆ ಕಾನ್ಪುರ ಸಮೀಪ ತಾಂತ್ರಿಕ ದೋಷದಿಂದ ನಿಲುಗಡೆಯಾಗಿತ್ತು. ಇದಕ್ಕೆ ಪ್ರತಿಪಕ್ಷಗಳು ವ್ಯಂಗ್ಯವಾಡಿದ್ದವು. ಆದರೀಗ ಅದು ತನ್ನ ಕಾರ್ಯವೈಖರಿಯ ಮೂಲಕವೇ ಎಲ್ಲರ ಬಾಯಿಮುಚ್ಚಿಸುವಂತಹ ಉತ್ತರವನ್ನು ನೀಡಿದೆ.
ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್ ಹಳೆಯ ಶತಾಬ್ದಿ ರೈಲನ್ನು ರಿಪ್ಲೇಸ್ ಮಾಡಲಿದೆ.
ಹೈಸ್ಪೀಡ್ ರೈಲಾದ ಇದನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಂಪೂರ್ಣ ದೇಶೀಯವಾಗಿ ನಿರ್ಮಾಣ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.