ಬೆಳ್ತಂಗಡಿ : ಬಿಜೆಪಿ ಪಕ್ಷದ ವಿಚಾರಧಾರೆಯನ್ನು ಮನೆ ಮನಗಳಿಗೆ ಮುಟ್ಟಿಸಿದ ಕಾರ್ಯಕರ್ತರ ಮತ್ತು ಮತವನ್ನು ನೀಡಿ ಹರಸಿದ ಮತದಾರ ಬಂಧುಗಳ ಸಹಕಾರವನ್ನು ನೆನೆದು ಅಭಿವೃದ್ಧಿಯಲ್ಲಿ ಉತ್ಸಾಹ ಬಂದಿರುವುದರಿಂದ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಂಬರ್ಒನ್ ಸಂಸದನಾಗಿ ಮೂಡಿಬರಲು ಕಾರಣವಾಯಿತು ಎಂದು ಮಂಗಳೂರು ಲೋಕಸಭಾಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಈಚೆಗೆ ಬಳಂಜದಲ್ಲಿ ಗ್ರಾಮ ಪಂಚಾಯತು ಚುನಾವಣೆಯಲ್ಲಿ ವಿಜೇತರಾದ ಸದಸ್ಯರಿಗೆ ಮತ್ತು ಮತದಾರ ಭಾಂಧವರಿಗೆ ಅಭಿನಂದನಾ ಮತ್ತು ಅಭಿವಂದನಾ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಇತಿಹಾಸದಲ್ಲಿ ಭಾರತೀಯ ಜನತಾ ಪಾರ್ಟಿ ನೇತ್ರತ್ವದ ಎನ್ಡಿಎ ಅಪಾರ ಜನಮೆಚ್ಚುಗೆ ಗಳಿಸಿದ್ದು ವಿದೇಶದಲ್ಲಿಯು ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ನೋಡಿ ಬೆಂಬಲಗಳು ವ್ಯಕ್ತವಾಗಿದೆ. ಇದನ್ನು ಸಹಿಸದ ಕಾಂಗ್ರೇಸ್ ಅಪಪ್ರಚಾರಗಳನ್ನು ಮಾಡಿಕೊಂಡು ಮತಗಳಿಸುವ ಬಂಡವಾಳ ಎಂದುಕೊಂಡು ಅಭಿವೃದ್ಧಿಗೆ ಅಡ್ಡಗಾಲು ಹಾಕಿ ತನ್ನ ಬೇಳೆ ಬೇಯಿಸುತ್ತಿರುವುದು ದುರಾದೃಷ್ಟವಾಗಿದ್ದರೂ ಅದನ್ನು ಕ್ಯಾರೇ ಮಾಡದ ಮತದಾರ ಬಂಧುಗಳು ರಾಜ್ಯದಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು. ಬಳಂಜದಲ್ಲಿ ಪ್ರಥಮ ಭಾರಿಗೆ ಅಧಿಕ ಸಂಖ್ಯೆಯ ಸದಸ್ಯರು ಆಯ್ಕೆಯಾಗಿದ್ದು ಬಳಂಜ ಗ್ರಾಮವನ್ನು ಆದರ್ಶಗ್ರಾಮವನ್ನಾಗಿಸುವಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಅಳದಂಗಡಿಯಲ್ಲಿ 3ಜಿ : ಅಳದಂಗಡಿಯ ಜನತೆಯ ಬಹುದಿನಗಳ ಬೇಡಿಕೆಯಲ್ಲಿರುವ ಬಿಎಸ್ಎನ್ಎಲ್ 3ಜಿ ಸೇವೆಯನ್ನು ಮಾಡಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರೂ ಇದರ ಬಗ್ಗೆ ಯಾರು ಪ್ರಯತ್ನಿಸದ ಹಿನ್ನೆಲೆಯಲ್ಲಿ ಅಳದಂಗಡಿಯ ಸುಪ್ರೀತ್ ಜೈನ್ ಮತ್ತು ನಾವರದ ವಿಜಯಕುಮಾರ್ ಜೈನ್ ನೀಡಿದ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸಂಸದರು ಶೀಘ್ರದಲ್ಲಿ ಕಾನೂನು ರೀತಿಯ ಕ್ರಮಗಳನ್ನು ಪರಿಶೀಲಿಸಿ ೩ಜಿ ಜಾರಿ ಬರುವಂತೆ ಇಲಾಖೆಯೊಂದಿಗೆ ಮಾತನಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಪ್ರಭಾಕರ ಬಂಗೇರ, ಅಳದಂಗಡಿ ಜಿ.ಪಂ ಸದಸ್ಯೆ ತುಳಸಿ ಹಾರಬೆ, ಪ್ರಭಾಕರ ಶೆಟ್ಟಿಉಪ್ಪಡ್ಕ ಮಾತನಾಡಿದರು. ವೇದಿಕೆಯಲ್ಲಿ ಅಳದಂಗಡಿ ತಾ.ಪಂ.ಸದಸ್ಯ ಸುಧೀರ್ ಸುವರ್ಣ, ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಬಿ.ಜೆ.ಪಿ. ಯುವ ಮೋರ್ಚಾದ ರಂಜನ್ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಕೊರಗಪ್ಪ ನಾಕ, ಜಯ ಸಾಲ್ಯಾನ್ ಬದಿನಡೆ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಡೀಕಯ್ಯ, ಗ್ರಾ.ಪಂ. ವಿಜೇತ ಸದಸ್ಯರಾದ ಅನಿಲ್ ನಾಯ್ಗ, ಮಂಗಳಾ ದೇವಾಡಿಗ, ಬಾಲಕೃಷ್ಣ ಪೂಜಾರಿ ಯೈಕುರಿ, ಮಂಜುಳಾ, ಶೋಭ, ಹೇಮಂತ್, ಜಯಶ್ರೀ ಹೆಗ್ಡೆ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸತೀಶ್ ರೈ ಬಾರ್ದಡ್ಕ ವಹಿಸಿದ್ದರು.
ಬಿಜೆಪಿಗೆ ಸೇರ್ಪಡೆ: ಸಮಾರಂಭದಲ್ಲಿ ಬೆಳ್ತಂಗಡಿ ಮಂಜುಶ್ರೀ ಜೇಸಿಸ್ ಇದರ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಕಾಫಿನಡ್ಕ ಈ ಸಂದರ್ಭ ಬಿಜೆಪಿ ಪಕ್ಷಕ್ಕೆ ಸೇರಿದರು. ಇವರನ್ನು ಸಂಸದರಾದ ನಳಿನ್ ಕುಮಾರ್ ಕಟೀಲು ಕೇಸರಿ ಶಾಲು ಹಾಕಿ ಪಕ್ಷದಧ್ವಜ ನೀಡಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಯುವ ನ್ಯಾಯವಾದಿ ಹರೀಶ್ ಪೂಂಜ, ಚುನಾವಣೆಗೆ ಸ್ಪರ್ಧಿಸಿದ್ದ ಸುನಂದ ಹೆಗ್ಡೆ, ಗಣೇಶ ಸಂಭ್ರಮ, ರಮೇಶರೈ, ಜಯಶೆಟ್ಟಿ ನಾಲ್ಕೂರು, ಲಲಿತ, ಲೀಲಾ ಹಾಗೂ ಪ್ರಮುಖರಾದ ಮೋಹನ್ದಾಸ್ ಅಳದಂಗಡಿ, ಸುಪ್ರೀತ್ಜೈನ್ ಅಳದಂಗಡಿ, ಸುಂದg ಆಚಾರ್ಯ ಕುದ್ಯಾಡಿ, ಚಂದ್ರಶೇಖರ ಉಪಾಧ್ಯಾಯ, ಸುಬ್ರಹ್ಮಣ್ಯ ಭಟ್ ಪಿಲ್ಯ, ಕುದ್ಯಾಡಿ ಗ್ರಾಮ ಪಂಚಾಯತು ಸದಸ್ಯ ದಿನೇಶ್ ಬಿರ್ಮೆಜಿರಿ, ತೆಂಕಕಾರಂದೂರು, ನಾಲ್ಕೂರು ಗ್ರಾಮ ಸಮಿತಿ ಅಧ್ಯಕ್ಷರು, ಬಳಂಜ ಭಾಜಪ ಕಾರ್ಯದರ್ಶಿ ಸಂಜೀವ ಅಚಾರ್ಯ ಭಾಗವಹಿಸಿದ್ದರು.
ದೇಶಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ಗ್ರಾ.ಪಂ.ಸದಸ್ಯೆ ಮಂಗಳಾ ದೇವಾಡಿಗ ಸ್ವಾಗತಿಸಿದರು. ಗ್ರಾಮ ಪಂಚಾಯತು ನೂತನ ಸದಸ್ಯ ಅನಿಲ್ ನಾಯ್ಗ ಬಳಂಜ ಪ್ರಸ್ತಾವಿಸಿದರು. ವಿಜಯಕುಮಾರ್ ಜೈನ್, ನಾವರ ಕಾರ್ಯಕ್ರಮ ನಿರ್ವಹಿಸಿದರು, ಅಳದಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ದೇವಾಡಿಗ ಧನ್ಯವಾದ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.