ಗೋರಖ್ಪುರ: ಬಡವರಿಗೆ ಶೌಚಾಲಯ ಮತ್ತು ಇಂಧನಗಳನ್ನು ಒದಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಸುದೀರ್ಘ ಕಾಲದವರೆಗೂ ಈ ದೇಶವನ್ನು ಮುನ್ನಡೆಸುತ್ತಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಸಂದರ್ಶನ ನೀಡಿ ಮಾತನಾಡಿದ ಅವರು, ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ, 2014ಕ್ಕಿಂತಲೂ 3 ಸ್ಥಾನ ಹೆಚ್ಚಿಗೆ ಬರಲಿದೆ ಎಂದಿದ್ದಾರೆ.
ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಅವರು ಕಂಡ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುತ್ತಿದ್ದಾರೆ ಮತ್ತು 2019ರಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
“ಈ ದೇಶ ಹಳ್ಳಿಗಳಲ್ಲಿ ಬದುಕುತ್ತಿದೆ ಎಂದು ಸಂಸತ್ತಿನಲ್ಲಿ ಇಂದಿರಾ ಗಾಂಧಿ ಅವರಿಗೆ ಲೋಹಿಯಾ ಹೇಳಿದ್ದರು. ಪ್ರತಿ ಬಡ ಮನುಷ್ಯ ತನ್ನ ಮನೆಯಲ್ಲಿ ಶೌಚಾಲಯ ಹೊಂದುವಂತೆ ಮತ್ತು ಆತನ ಇಂಧನದ ಅವಶ್ಯಕತೆ ನೀಗುವಂತೆ ಮಾಡುವ ಪ್ರಧಾನಿ ಕನಿಷ್ಠ 25 ವರ್ಷಗಳಾದರೂ ದೇಶವನ್ನು ಆಳಬೇಕು” ಎಂದಿದ್ದಾರೆ.
ಲೋಹಿಯಾ ಅವರು 1966 ಅಥವಾ 1967ರಲ್ಲಿ ಲೋಹಿಯಾ ಅವರು ಇಂದಿರಾ ಗಾಂಧಿಗೆ ಈ ಮಾತನ್ನು ಹೇಳಿದ್ದರು. ಆದರೆ ಅವರ ಆಶಯ ಈಗ ಮಾತ್ರ ಈಡೇರುತ್ತಿದೆ ಎಂದಿದ್ದಾರೆ.
ಈ ಬಾರಿಯ ಚುನಾವಣೆ ಜಾತಿ, ಜನಾಂಗ, ಧರ್ಮ ಮತ್ತು ವೋಟ್ ಬ್ಯಾಂಕ್ ಅನ್ನು ಮೀರಿದ ಫಲಿತಾಂಶವನ್ನು ನೀಡಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.