ದಿಯೋಘರ್: ಕಾಂಗ್ರೆಸ್ ನಾಯಕರುಗಳಾದ ಮಣಿಶಂಕರ್ ಅಯ್ಯರ್ ಮತ್ತು ಸ್ಯಾಮ್ ಪಿತ್ರೊಡ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಇಬ್ಬರು ಬ್ಯಾಟ್ಸ್ಮನ್ಗಳನ್ನು ನಾಮ್ದಾರ್ಗಳನ್ನು ಸಮರ್ಥಿಸಿಕೊಳ್ಳಲು ಫೀಲ್ಡ್ಗೆ ಇಳಿಸಲಾಗಿದೆ ಎಂದಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಖಚಿತಗೊಂಡಿದೆ, ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅಯ್ಯರ್ ಮತ್ತು ಪಿತ್ರೋಡ ಅವರನ್ನು ಫೀಲ್ಡ್ಗೆ ಇಳಿಸಿದೆ. ಸೋಲಿನ ಹೊಣೆಯನ್ನು ಇವರಿಬ್ಬರ ಮೇಲೆ ಹಾಕುವುದು ಆ ಪಕ್ಷದ ಉದ್ದೇಶ. ಒಬ್ಬರು 1984ರ ಸಿಖ್ ದಂಗೆಯನ್ನು ಆಗಿದ್ದು ಆಗಿ ಹೋಗಿದೆ ಎನ್ನುತ್ತಾರೆ, ಮತ್ತೊಬ್ಬರು ನನ್ನನ್ನು ತೀವ್ರ ಸ್ವರೂಪದಲ್ಲಿ ಅವಹೇಳನ ಮಾಡುತ್ತಾರೆ” ಎಂದು ಮೋದಿ ಹೇಳಿದ್ದಾರೆ.
ಅಯ್ಯರ್ ಅವರು ಮೋದಿಯನ್ನು ನೀಚ್ ಆದ್ಮಿ ಎಂದು ಈ ಹಿಂದೆ ಹೇಳಿದ್ದರು, ಮೊನ್ನೆ ತನ್ನ ಹೇಳಿಕೆಯನ್ನು ಮತ್ತೊಮ್ಮೆ ಸರ್ಥನೆ ಮಾಡಿಕೊಂಡಿದ್ದಾರೆ. ಅವರ ಈ ಧೋರಣೆಗೆ ಭಾರೀ ಖಂಡನೆಗಳು ವ್ಯಕ್ತವಾಗುತ್ತಿವೆ.
“ಕುಟುಂಬದ ಆಡಳಿತವೊಂದು 55 ವರ್ಷಗಳಲ್ಲಿ ಮಾಡಲಾಗದ್ದನ್ನು ಬಿಜೆಪಿ ಸರ್ಕಾರದ 55 ತಿಂಗಳುಗಳಲ್ಲಿ ಮಾಡಿ ತೋರಿಸಿದೆ. ದೇಶವನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಸರ್ಕಾರದ ಮೇಲೆ ಒಂದೇ ಒಂದು ಆರೋಪವಿಲ್ಲ. ಬಾಬಾಧಾಮ್(ದಿಯೋಘರ್)ನಿಂದ ಈ ಮಾತನ್ನು ಹೇಳುವಾಗ, ನನಗೆ ಸೇವೆ ಮಾಡಲು ಅವಕಾಶ ಕೊಟ್ಟ ಇಲ್ಲಿನ ಜನರ ಬಗ್ಗೆ ಹೆಮ್ಮೆ ಎನಿಸುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.