ಶ್ರೀನಗರ: ಮೂರು ತಿಂಗಳ ಹಿಂದೆ ನಡೆದ ಭೀಕರ ಪುಲ್ವಾಮ ದಾಳಿಯಲ್ಲಿ ಬದುಕುಳಿದ ಸಿಆರ್ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರು, ಕಾಶ್ಮೀರದ ಹಸಿದ ಮಗುವೊಂದಕ್ಕೆ ಆಹಾರವನ್ನು ಕೈಯ್ಯಾರೆ ತಿನ್ನಿಸುವ ವೀಡಿಯೋವೊಂದು ಈಗ ವೈರಲ್ ಆಗಿದೆ. ತನ್ನ ಈ ಕಾರ್ಯದ ಮೂಲಕ ಇಕ್ಬಾಲ್ ಅವರು, ‘ಮಾನವೀಯತೆ ಎಲ್ಲಾ ಧರ್ಮದ ಜನನಿ’ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
49 ಬೆಟಾಲಿಯನ್ ಶ್ರೀನಗರ ವಲಯದ ಸಿಆರ್ಪಿಎಫ್ ಯೋಧರಾದ ಇಕ್ಬಾಲ್ ಅವರು, ನವಕಡಲ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆ ಅವರಿಗೆ ಆಹಾರ ಪೂರೈಕೆಯಾಗಿದ್ದ ಸಂದರ್ಭ ಮಗುವೊಂದು ಅಲ್ಲೇ ಕುಳಿತಿತ್ತು. ಆಹಾರ ನೋಡಿದ ತಕ್ಷಣ ನನಗೂ ಬೇಕು ಎಂದು ಮಗು ಕೇಳಿದೆ. ಇಕ್ಬಾಲ್ ಅವರು ಆಹಾರವನ್ನು ನೀಡಿದ್ದಾರೆ, ಆದರೆ ಮಗುವಿನ ಕೈ ಬಲಹೀನಗೊಂಡಿದ್ದವು. ಅದು ದಿವ್ಯಾಂಗ ಮಗು ಆಗಿತ್ತು. ಹೀಗಾಗಿ ಇಕ್ಬಾಲ್ ಆ ಮಗುವಿಗೆ ಕೈತುತ್ತು ತಿನ್ನಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲರೂ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಮೂರು ತಿಂಗಳುಗಳು ಹಿಂದೆ ಸಾವಿನ ದವಡೆಯಿಂದ ಪಾರಾಗಿರುವ ಇಕ್ಬಾಲ್ ಅವರು, ಜಗತ್ತಿಗೆ ಮಾನವೀಯತೆ ಅಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
“Humanity is the mother of all religions”
HC Driver Iqbal Singh of 49 Bn Srinagar Sector CRPF deployed on LO duty feeds a paralysed Kashmiri kid in Nawakadal area of Srinagar. In the end, asks him “Do you need water?”
“Valour and compassion are two sides of the same coin” pic.twitter.com/zYQ60ZPYjJ
— Srinagar Sector CRPF 🇮🇳 (@crpf_srinagar) May 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.